ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸಿನಿಮಾ ‘ಓ ಮೈ ಗಾಡ್’ ಗೆ ದೊಡ್ಡ ಸಂಕಷ್ಟ ಎದುರಾಗಿದೆ. ಆ ಸಂಕಷ್ಟ ನೋಡಿ ಅಕ್ಕಿ ಓ ಮೈ ಗಾಡ್ ಅಂತ ಹೇಳ್ತಿದ್ದಾರೆ. ಹೌದು..ಓ ಮೈ ಗಾಡ್ ಪಾರ್ಟ್2ನ್ನು ಇದೀಗ ಸೆನ್ಸಾರ್ ಮಂಡಲಿ ರಿಜೆಕ್ಟ್ ಮಾಡಿದೆ.
ಧರ್ಮ ದೇವರುಗಳ ಮತ್ತು ಪವಿತ್ರಗ್ರಂಥಗಳ ಹಿನ್ನೆಲೆಯಲ್ಲಿ ಸಿನಿಮಾ ಮಾಡಿದ್ರೆ ಹಿಂದಿನಂತಲ್ಲ.. ಜನ ತಕ್ಷಣ ಎಚ್ಚೆತ್ತುಕೊಂಡು ಬಿಡುತ್ತಾರೆ. ಸಿನಿಮಾ ರಿಲೀಸ್ಗೆ ಅವಕಾಶವನ್ನೆ ಕೊಡೋದಿಲ್ಲಾ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಆದಿಪುರುಷ್ ಸಿನಿಮಾದಲ್ಲಿ ರಾಮಾಯಣದ ಕತೆಯನ್ನೆ ತಿರುಚಲಾಗಿದೆ ಎಂದು ಜನರಿಂದ ವಿರೋಧ ವ್ಯಕ್ತವಾಗಿತ್ತು. ಜನ ಆದಿಪುರುಷ್ ಸಿನಿಮಾ ವಿರುದ್ಧ ರೊಚ್ಚಿಗೆದ್ದಿದ್ದರು.
ಹಲವು ರಾಜ್ಯ, ನಗರಗಳಲ್ಲಿ ಆದಿಪುರುಷ್ ಸಿನಿಮಾನೆ ಬ್ಯಾನ್ ಆಗುವಂತೆ ಮಾಡಿದ್ರು. ಇದೀಗ ಆದಿಪುರುಷ್ ನಂತರ ಜನರ ದೃಷ್ಟಿ ಅಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್’ ಚಿತ್ರದತ್ತ ಮೇಲೆ ಬಿದ್ದಿದೆ. ಇತ್ತೀಚೆಗಷ್ಟೆ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಟೀಸರ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಿವಾಗಿತ್ತು. ಅಲ್ಲದೆ ಓ ಮೈ ಗಾಡ್ ಪಾರ್ಟ್2ನ್ನು ಇದೀಗ ಸೆನ್ಸಾರ್ ಮಂಡಲಿ ರಿಜೆಕ್ಟ್ ಮಾಡಿದೆ.