![ಅಶೋಕ್ ಅವರನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.](https://i0.wp.com/veekshakavani.com/wp-content/uploads/2023/10/%E0%B2%85%E0%B2%B6%E0%B3%8B%E0%B2%95%E0%B3%8D-%E0%B2%85%E0%B2%B5%E0%B2%B0%E0%B3%81-%E0%B2%86%E0%B2%B8%E0%B3%8D%E0%B2%AA%E0%B2%A4%E0%B3%8D%E0%B2%B0%E0%B3%86%E0%B2%97%E0%B3%86-%E0%B2%A6%E0%B2%BE%E0%B2%96%E0%B2%B2%E0%B3%81.jpg?resize=640%2C400&ssl=1)
ಕುಂದಾಪುರ: ಕುಂದಾಪುರ ಅರಣ್ಯ ಇಲಾಖೆಯ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕರೊಬ್ಬರ ಮೇಲೆ ನಾಲ್ವರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆಗೊಳಗಾದ ಚಾಲಕ ಕುಂದಾಪುರದ ಕುಂದೇಶ್ವರದ ನಿವಾಸಿ ಅಶೋಕ್ ಅವರನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಕುಂದಾಪುರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಅ.18ರಂದು ಸಂಜೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಅ.18ರಂದು ಸಂಜೆಯ ವೇಳೆ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದೊಳಕ್ಕೆ ಬಂದ ಆರೋಪಿಗಳಾದ ಇಮ್ತಿಯಾಝ್, ವಿನೋದ್ ಹಾಗೂ ಮತ್ತಿಬ್ಬರು ಆರೋಪಿಗಳು ಅಶೋಕ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆನ್ನಲಾಗಿದೆ.
ಅಕ್ರಮ ಮರ ಸಾಗಾಟದ ವಾಹನವೊಂದನ್ನು ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದು ಅ.18ರಂದು ಪ್ರಕರಣ ದಾಖಲಿಸಿದ್ದರು. ಈ ಮಾಹಿತಿಯನ್ನು ಇಲಾಖೆಗೆ ಚಾಲಕ ಅಶೋಕ್ ನೀಡಿದ್ದಾಗಿ ಭಾವಿಸಿದ್ದ ಆರೋಪಿಗಳು ಈ ಹಲ್ಲೆ ನಡಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.