ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ ಇದರ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಪರಿಕಲ್ಪನೆ ಅಡಿಯಲ್ಲಿ ಗೋಪಾಲ್ ಭಂಡಾರಿ ಸುಧೆಕಾರ್ ಕಲ್ಲಡ್ಕ ಇವರ ಮನೆಗೆ ಹೋಗಿ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಾ ಶೆಟ್ಟಿ ದುಶ್ಚಟದಿಂದ ಆಗುವ ಅಡ್ಡ ಪರಿಣಾಮ ಬಗ್ಗೆ ತಿಳಿ ಹೇಳಿ ಮಗಳ ಮದುವೆಯ ನಿಮಿತ್ತ ನಡೆಯುವ ಕಾರ್ಯಕ್ರಮದಲ್ಲಿ ಮದ್ಯಪಾನ ಕಾರ್ಯಕ್ರಮ ಮಾಡದಂತೆ ಮನವಿಪತ್ರ ನೀಡಿದರು.
ಈ ಸಂದರ್ಭದಲ್ಲಿ ಯೋಜನೆಯ ಬಾಳ್ತಿಲ ಒಕ್ಕೂಟದ ಅಧ್ಯಕ್ಷರಾದ ಉಮಾವತಿ, ಸೇವಾ ಪ್ರತಿನಿಧಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ವಿದ್ಯಾ, ಸದಸ್ಯರಾದ ಸಂತೋಷ್ ಕುಮಾರ್ ಬೋಲ್ಪೊಡಿ ಉಪಸ್ಥಿತರಿದ್ದರು.