ಆನೆ ದಂತ ಪ್ರಕರಣ: ನಟ ಮೋಹನ್‌ಲಾಲ್‌ಗೆ ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ!

Share with

ಪೆರುಂಬವೂರ್‌ನ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಟ ಮೋಹನ್‌ಲಾಲ್‌ಗೆ ಅಕ್ರಮ ದಂತಗಳನ್ನು ಹೊಂದಿರುವ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ನಟ ನವೆಂಬರ್ 3 ರಂದು ಹಾಜರಾಗಬೇಕು. ಪ್ರಕರಣದ ವಿಚಾರಣೆಯನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರವು ಈ ಹಿಂದೆ ಮಾಡಿದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. 2011ರಲ್ಲಿ ಕೊಚ್ಚಿಯ ತೇವಾರದಲ್ಲಿರುವ ನಟನ ನಿವಾಸದಿಂದ ಆದಾಯ ತೆರಿಗೆ ಇಲಾಖೆ ನಾಲ್ಕು ದಂತಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ್ದು. ಮೋಹನ್ ಲಾಲ್ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


Share with

Leave a Reply

Your email address will not be published. Required fields are marked *