ಮಾರ್ಬಲ್‌ ಸಾಗಾಟದ ಲಾರಿ ಪಲ್ಟಿಯಾಗಿ ಕಾರ್ಮಿಕರು ಗಂಭೀರ

Share with

ಬಂಟ್ವಾಳ:ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಸಮೀಪ ಮಾರ್ಬಲ್‌ ತುಂಬಿಕೊಂಡು ಬಂದ ಲಾರಿಯೊಂದು ಪಲ್ಟಿಯಾಗಿ ನಾಲ್ಕು ಜನ ಗಂಭೀರ ಗಾಯಗೊಂಡ ಘಟನೆ ಅ. 4ರಂದು ನಡೆದಿದೆ.

ಲಾರಿ ಪಲ್ಟಿಯಾದ ಪರಿಣಾಮ ಕಾರ್ಮಿಕರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ನಾಲ್ಕು ಆಂಬ್ಯುಲೆನ್ಸ್‌ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗಾಯಾಳುಗಳನ್ನು ಉತ್ತರ ಭಾರತದ ಮೂಲದವರು ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿನೆಯನ್ನು ನಡೆಸುತ್ತಿದ್ದಾರೆ.

ಮಾರ್ಬಲ್ ಅನ್ನು ಅನ್ ಲೋಡ್ ಮಾಡಲು ಲಾರಿಯನ್ನು ರಿವರ್ಸ್ ತೆಗೆಯುವ ವೇಳೆ ಬ್ರೇಕ್ ಫೈಲ್ ಅದ ಕಾರಣ ಲಾರಿ ಪಲ್ಟಿಯಾಗಿ ನೀರಿನ ತೊಟ್ಟಿಗೆ ಬಿದ್ದು ಲಾರಿಯಲ್ಲಿದ್ದ ಕಾರ್ಮಿಕರು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.


Share with

Leave a Reply

Your email address will not be published. Required fields are marked *