ಸೂಪರ್ ಸ್ಟಾರ್ ರಜಿನಿಕಾಂತ್, ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಜೈಲರ್ ಚಿತ್ರ ತೆರೆಗೆ ಅಪ್ಪಳಿಸಿದ್ದು, ಬೆಂಗಳೂರಿನಲ್ಲಿ ಯಾವ ಚಿತ್ರವೂ ಮಾಡದ ದಾಖಲೆ ಸೃಷ್ಟಿಸಿದೆ. ನಗರದಲ್ಲಿ ಚಿತ್ರವೊಂದಕ್ಕೆ ಬಿಡುಗಡೆಯ ದಿನ ಅತಿ ಹೆಚ್ಚು ಪ್ರದರ್ಶನ ಜೈಲರ್ ಸಿನಿಮಾಗೆ ಸಿಕ್ಕಿರುವುದು ದೊಡ್ಡ ರೆಕಾರ್ಡ್ ಆಗಿದೆ.
ಮೊದಲ ದಿನ ತಮಿಳು, ಕನ್ನಡ & ತೆಲುಗು ಈ ಮೂರೂ ಅವತರಣಿಕೆಗಳಿಗೆ 1092 ಪ್ರದರ್ಶನಗಳು ಲಭಿಸಿವೆ. KGF ಚಾಪ್ಟರ್ 2ಗೆ 1037, ಅವತಾರ್ ದಿ ವೇ ಆಫ್ ವಾಟರ್‌ಗೆ 1014 ಪ್ರದರ್ಶಗಳು ದೊರಕಿದ್ದವು.