ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಆಟಿದ ಲೇಸ್

Share with

ರಂಗ ಮಯೂರಿ ಕಲಾಶಾಲೆಯ ಸಹಯೋಗ – ಆಟಿ ಕಳೆಂಜ ಕುಣಿತ – ಚೆನ್ನಮಣೆ ಆಟದ ಮೂಲಕ ಉದ್ಘಾಟನೆ

Sullia: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಸುಳ್ಯದ ರಂಗಮಯೂರಿ ಕಲಾಶಾಲೆಯ ಸಹಯೋಗದಲ್ಲಿ ಆಟಿದ ಲೇಸ್ ಕಾರ್ಯಕ್ರಮ ಆ.1ರಂದು ಸುಳ್ಯದ ಶ್ರೀಹರಿ ವಾಣಿಜ್ಯ ಸಂಕೀರ್ಣದ ರಂಗಮಯೂರಿ ಕಲಾ ಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮದ ಆರಂಭದಲ್ಲಿ ಆಟಿ ಕಳೆಂಜ ವೇಷಧಾರಿಯಿಂದ ಆಟಿ ಕಳೆಂಜ ಕುಣಿತ ಹಾಗೂ ಪಾಡ್ದನ ಹೇಳಲಾಯಿತು. ಬರಹಗಾರರಾದ ಭವಾನಿಶಂಕರ ಅಡ್ತಲೆ ಹಾಗೂ ಕೆ‌.ಜೆ.ಯು. ಜಿಲ್ಲಾಧ್ಯಕ್ಷರಾದ ತಾರನಾಥ ಗಟ್ಟಿ ಕಾಪಿಕಾಡು ಅವರು ಜಂಟಿಯಾಗಿ ಚೆನ್ನಮಣೆ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಭವಾನಿಶಂಕರ ಅಡ್ತಲೆ ಅವರು ಆಟಿ ತಿಂಗಳ ಮಹತ್ವ ಹಾಗೂ ಆಚರಣೆಯ ಕುರಿತು ಮಾತನಾಡಿದರು.
ಸುಳ್ಯ ತಾಲೂಕು ಕೆ‌.ಜೆ.ಯು. ಘಟಕದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು , ಬರಹಗಾರಾದ ಭವಾನಿಶಂಕರ ಅಡ್ತಲೆ, ಕೆ.ಜೆ.ಯು. ಜಿಲ್ಲಾ ಘಟಕದ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಹಿರಿಯ ಪತ್ರಕರ್ತ ರಿಚರ್ಡ್ ಲಸ್ರಾದೋ, ಕೆ.ಜೆ.ಯು. ಸುಳ್ಯ ತಾಲೂಕು ಘಟಕದ ಕಾರ್ಯದರ್ಶಿ ರಮೇಶ್ ನೀರಬಿದಿರೆ , ಕೋಶಾಧಿಕಾರಿ ಶ್ರೀಮತಿ ಜಯಶ್ರೀ ಕೊಯಿಂಗೋಡಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು, ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕೆ.ಜೆ.ಯು. ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸುಳ್ಯ ತಾಲೂಕು ಘಟಕದ ಪದಾಧಿಕಾರಿಗಳು, ರಂಗಮಯೂರಿ ಕಲಾ ಶಾಲೆಯ ಪೋಷಕರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *