ಬೆಂಗಳೂರು: ಜು.12ರಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ‘ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಕೋಲಾರ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿವೆ, ಜಿಲ್ಲೆಯಲ್ಲಿ ಇಂದಿಗೂ ಶುದ್ಧ ಕುಡಿಯುವ ನೀರು ಸಿಕ್ಕಿಲ್ಲʼ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ʼಇದರ ವಿರುದ್ಧ ಇಡೀ ಜಿಲ್ಲೆ ಒಗ್ಗಟ್ಟಾಗುತ್ತಿದ್ದು ನಾವು ಆಂಧ್ರಪ್ರದೇಶಕ್ಕೆ ಸೇರಲು ತೀರ್ಮಾನ ಮಾಡುತ್ತೇವೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಇದರ ಬೆನ್ನಲ್ಲೇ ಪಕ್ಷಬೇಧ ಮರೆತು ಬಹುತೇಕ ಸದಸ್ಯರು ಮಂಜುನಾಥ್ ವಿರುದ್ಧ ಹರಿಹಾಯ್ದ ನಂತರ ಮಂಜುನಾಥ್ ಅವರು ಸದನದ ಕ್ಷಮೆಯಾಚಿಸಿದರು.