
ಮಂಗಳೂರು: ಮಂಗಳೂರಿನ ಕುಕ್ಕರ್ ಬಾಂಬರ್ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು ಎಂದು ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇದರ ಮಾಸ್ಟರ್ ಮೈಂಡ್ ಅರಾಫತ್ ಆಲಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್‌ಐಎ ತಂಡವು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದು, ಕುಕ್ಕರ್ ಬಾಂಬ್ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್ ಹಾಗೂ ಮಂಗಳೂರು ಗೋಡೆ ಬರಹದ ಮಾಸ್ಟರ್ ಮೈಂಡ್ ಅರಾಫತ್ ಆಗಿದ್ದು, ಈತ ವೀದೆಶದಲ್ಲಿ ನೆಲೆಸಿ ಯುವಕರನ್ನು ಉಗ್ರ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದ, ಪ್ರಚೋದನೆಗೆ ಒಳಗಾಗಿ ಶಾರೀಕ್ ಟೀಮ್‌ನಿಂದ ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಉಗ್ರ ಕೃತ್ಯದ ಯೋಜನೆ ನಡೆದಿತ್ತು.
ಮೊದಲ ಬಾರಿಗೆ ಮಂಗಳೂರಿನಲ್ಲಿ ಉಗ್ರ ಗೋಡೆ ಬರಹ ಪತ್ತೆಯಾಗಿದ್ದು, ಆ ನಂತರ ಶಿವಮೊಗ್ಗದಲ್ಲಿ ಟ್ರಾಯಲ್ ಬ್ಲಾಸ್ಟ್ ಮಾಡಲಾಗಿದ್ದು, ಕೊನೆಗೆ ನ.10, 2022 ರಂದು ಕುಕ್ಕರ್ ಬಾಂಬ್ ಸ್ಪೋಟಿಸಲು ಸಂಚು ರೂಪಿಸಲಾಗಿತ್ತು.
ಆ ಬಳಿಕ ಶಾರೀಕ್‌ನನ್ನು ಬಂಧಿಸಿ ಎನ್‌ಐಎ ತಂಡವು ಬೆಂಗಳೂರಿಗೆ ಕರೆಸಿಕೊಂಡಿತ್ತು, ಇದೀಗ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಟಾರ್ಗೆಟ್ ಬಹಿರಂಗವಾಗಿದ್ದು, ಕುಕ್ಕರ್ ಬಾಂಬರ್ ಟಾರ್ಗೆಟ್ ಕದ್ರಿ ದೇವಸ್ಥಾನವೇ ಆಗಿತ್ತು ಎಂದು ಶಾರೀಕ್ ಹಾಗೂ ಅರಾಫತ್ ಇಬ್ಬರೂ ಎನ್‌ಐಎ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಎನ್‌ಐಎ ತಿಳಿಸಿದೆ.