ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎನ್.ಎಚ್.75ರ ಲಾವತ್ತಡ್ಕ ಎಂಬಲ್ಲಿ ಅಕ್ರಮವಾಗಿ ಅಕೇಶಿಯಾ ಉರುವಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ರವರ ಮಾರ್ಗದರ್ಶನದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಆರೋಪಿಯಾದ ಸಾಹುಲ್ ಹಮೀದ್, ಪಟ್ಲಡ್ಕ, ಕೊಕ್ಕಡ ಗ್ರಾಮ ಇವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ರೆಖ್ಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ತದಲಗಿ, ಬೀಟ್ ಫಾರೆಸ್ಟರ್‌ಗಳಾದ ನಿಂಗಪ್ಪ ಅವರಿ, ಸುನೀಲ್ ನಾಯ್ಕ ಕಾರ್ಯಾಚರಣೆ ನಡೆಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 50, 62 ಮತ್ತು 71 ಎ ಮತ್ತು ಕರ್ನಾಟಕ ಫಾರೆಸ್ಟ್ ನ ನಿಯಮ 144, 165 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.