ದಕ್ಷಿಣ ಕನ್ನಡ ಜಿಲ್ಲೆಯಿಂದ ವಿವಿಧೆಡೆ ಸಂಚರಿಸಲಿವೆ ಪಲ್ಲಕ್ಕಿ ಬಸ್‌ಗಳು

Share with

ಪಲ್ಲಕ್ಕಿ ಎಂಬ ಹೊಸ ಸ್ಲೀಪರ್ ಕೋಚ್ ಬಸ್ ಸೇರ್ಪಡೆಗೊಂಡಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ, ಐರಾವತ, ಅಂಬಾರಿಯಂತಹ ಐಷಾರಾಮಿ ಸ್ಲೀಪರ್ ಕೋಚ್ ಬಸ್‌ಗಳು ಲಭ್ಯವಿದ್ದು, ಈ ಸಾಲಿಗೆ ಪಲ್ಲಕ್ಕಿ ಎಂಬ ಹೊಸ ಸ್ಲೀಪರ್ ಕೋಚ್ ಬಸ್ ಸೇರ್ಪಡೆಗೊಂಡಿದೆ.

ಸಾರಿಗೆ ನಿಗಮದ 12 ಬಸ್‌ ಗಳು ಪ್ರಸ್ತುತ ಕಾರ್ಯಾಚರಣೆಯಲಿದ್ದು, ಈ ಸಾಲಿಗೆ ಈಗ 40 ಪಲ್ಲಕ್ಕಿ ಬಸ್‌ ಗಳನ್ನು ಸೇರಿಸಲು ಸಂಸ್ಥೆಯು ಯೋಜಿಸಿದೆ. ಈ ಪೈಕಿ 8 ಬಸ್ ಮಂಗಳೂರಿಗೆ ಹಾಗೂ 4 ಬಸ್ ಪುತ್ತೂರು ವಿಭಾಗಕ್ಕೆ ಬರಳಿದ್ದು ಹೆಚ್ಚಿನವು ಬೆಂಗಳೂರಿಗೆ ಪ್ರಯಾಣ ಮಾಡಲಿವೆ.

ಪುತ್ತೂರು ಮತ್ತು ಧರ್ಮಸ್ಥಳ ಡಿಪೋಗಳಿಗೆ ತಲಾ 2ರಂತೆ ಬಸ್ ಗಳನ್ನು ನೀಡಲಾಗಿದ್ದು ಪುತ್ತೂರು, ಧರ್ಮಸ್ಥಳ ಮತ್ತು ಬೆಳ್ತಂಗಡಿಯಿಂದ ಬೆಂಗಳೂರಿಗೆ ರಾತ್ರಿ ಸಂಚಾರ ನಡೆಸಲಿವೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ. ಇದಲ್ಲದೆ, 9 ಹೊಸ ಸಾಮಾನ್ಯ ಸಾರಿಗೆಯ ಕೆಂಪು ಬಸ್‌ಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗಕ್ಕೆ ಬರಲಿದ್ದು, ಇದರಲ್ಲಿ ಪುತ್ತೂರು, ಬಿ.ಸಿ.ರೋಡ್, ಧರ್ಮಸ್ಥಳ ಮತ್ತು ಮಡಿಕೇರಿ ಡಿಪೋಗಳಿಗೆ ತಲಾ 2 ಮತ್ತು ಸುಳ್ಯಕ್ಕೆ 1 ಬಸ್ ನಿಯೋಜಿಸಲು ಯೋಜಿಸಲಾಗಿದೆ.


Share with

Leave a Reply

Your email address will not be published. Required fields are marked *