ಮಂಗಳೂರು- ಪುತ್ತೂರು: ವಿದ್ಯುತ್ ಚಾಲಿತ ರೈಲು ಪ್ರಾಯೋಗಿಕ ಓಡಾಟ

Share with

ಮಂಗಳೂರು, ಜು.28: ಪಡೀಲ್‌ನಿಂದ ಪುತ್ತೂರು ತನಕದ ವಿದ್ಯುದ್ದೀಕರಣಗೊಂಡ ರೈಲು ಮಾರ್ಗದಲ್ಲಿ ವಿದ್ಯುತ್ ಚಾಲಿತ ರೈಲು ಇಂಜಿನ್‌ನ ಪ್ರಾಯೋಗಿಕ ಓಡಾಟವು ಶುಕ್ರವಾರ ನಡೆಯಿತು.

ಮಧ್ಯಾಹ್ನ ಸುಮಾರು 2:30ಕ್ಕೆ ಪಡೀಲ್‌ನಿಂದ ಹೊರಟ ರೈಲು ಸಂಜೆ 4ಕ್ಕೆ ಪುತ್ತೂರು ತಲುಪಿತು. ಹಿಮ್ಮುಖ ದಿಕ್ಕಿನಲ್ಲಿ ಚಲಿಸುವಾಗ ವೇಗ ಪ್ರಯೋಗ ನಡೆಸಲಾಯಿತು ಎಂದು ಮೈಸೂರು ವಿಭಾಗದ ಹಿರಿಯ ಹೇಳಿದ್ದಾರೆ.

ವಿದ್ಯುದ್ದೀಕರಣ ಕಾಮಗಾರಿಯು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಪ್ರಾಯೋಗಿಕ ಓಡಾಟ ನಡೆಸಿದ ವಿದ್ಯುದ್ದೀಕರಣಗೊಂಡ ಮಾರ್ಗದಲ್ಲಿ ರೈಲುಗಳನ್ನು ಓಡಿಸಲು ಟ್ರ್ಯಾಕ್ ಫಿಟ್ ಪ್ರಮಾಣಪತ್ರ ಶೀಘ್ರ ದೊರೆಯಬಹುದು ಎಂದು ರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರು-ಹಾಸನ-ಮಂಗಳೂರು ಮಾರ್ಗವು 2021ರ ಜುಲೈನಲ್ಲಿ ಅರಸೀಕೆರೆ-ಹಾಸನ (47 ಕಿಮೀ) ಸಹಿತ ಮೈಸೂರು-ಹಾಸನ- ಮಂಗಳೂರು ಮಾರ್ಗವನ್ನು (300 ಕಿಮೀ) ವಿದ್ಯುದ್ದೀಕರಿಸುವ ಗುತ್ತಿಗೆಯನ್ನುಒದಗಿಸಲಾಗಿತ್ತು. ಜೂನ್ 2024ರೊಳಗೆ ಈ ಯೋಜನೆ ಪೂರ್ಣಗೊಳಿಸಲು 2018ರ ಕೇಂದ್ರ ಬಜೆಟ್‌ನಲ್ಲಿ 315 ಕೋ.ರೂ ನಿಗದಿಪಡಿಸಲಾಗಿತ್ತು.


Share with

Leave a Reply

Your email address will not be published. Required fields are marked *