ಕಾಸರಗೋಡು: ಪೇಟೆ ಮಧ್ಯದಲ್ಲಿರುವ ಇತಿಹಾಸ ಪ್ರಸಿದ್ಧವಾದ ಪೇಟೆ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವಕ್ಕೆ ರವಿವಾರ ಚಾಲನೆ ನೀಡಲಾಯಿತು. ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸದ ಪ್ರಥಮ ದಿನದಿಂದ ಮುಕ್ತಾಯದವರೆಗೂ ಪ್ರಜ್ವಲಿಸುವ ನಂದಾದೀಪವನ್ನು ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ಮಯೂರ ಅಸ್ರ ಪ್ರಜ್ವಲಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖರಾದ ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು, ಶ್ರೀರಾಂ ಪ್ರಸಾದ್, ಕೆ.ಎನ್. ರಾಮಕೃಷ್ಣ ಹೊಳ್ಳ, ಕೆ.ವಿ.ಶ್ರೀನಿವಾಸ ಹೊಳ್ಳ, ಕಿಶೋರ್ ಕುಮಾರ್, ರವಿ ಕೇಸರಿ,ಗೋಪಾಲ್ ಭಟ್, ಹರೀಶ ಕೆ.ಆರ್. ಕ್ಷೇತ್ರದ ಪ್ರಧಾನ ಅರ್ಚಕ ಸೂರ್ಯನಾರಾಯಣ ನಾವಡ ಹಾಗೂ ಆಸ್ತಿಕರು ಉಪಸ್ಥಿತರಿದ್ದರು.