1ಪ್ರಥಮ :3000/- ದ್ವಿತೀಯ:2000/- ತೃತೀಯ:1000/-
ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಪುಟಾಣಿ ಮಕ್ಕಳಿಗೆ ವೀಕ್ಷಕವಾಣಿ ವತಿಯಿಂದ ರಾಧೆ-ಕೃಷ್ಣ 2023 ಭಾವಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಭಾವಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ರಾಧೆ-ಕೃಷ್ಣ ಭಾವಚಿತ್ರವನ್ನು ಸೆ.6 ರ ಒಳಗೆ ಕಳುಹಿಸುವಂತೆ ತಿಳಿಸಿದ್ದು, 200 ಕ್ಕಿಂತ ಹೆಚ್ಚು ಮಕ್ಕಳು ಭಾವಚಿತ್ರವನ್ನು ಕಳುಹಿಸಿದ್ದರು. ಸ್ಪರ್ಧೆಯಲ್ಲಿ ಷರತ್ತುಗಳನ್ನು ನೀಡಿದ್ದು ಇದರ ಅನ್ವಯ ಆಯ್ದ ಫೊಟೊಗಳನ್ನು ವೀಕ್ಷಕವಾಣಿ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಹೆಚ್ಚು ಮೆಚ್ಚುಗೆ ಪಡೆದ ಭಾವಚಿತ್ರವನ್ನು ಸ್ಪರ್ಧೆಯ ವಿಜೇತರಾಗಿ ಪರಿಗಣಿಸಲಾಗಿದೆ.
ವಿಜೇತರಿಗೆ ವಿಶೇಷ ಬಹುಮಾನ:
ವೀಕ್ಷಕವಾಣಿ ʼರಾಧೆ-ಕೃಷ್ಣ 2023ʼ ಭಾವಚಿತ್ರ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದು ಪ್ರಥಮ ಮಡಿಕೇರಿ ದಿಯಾನ್ ಕೃಷ್ಣ(11 ತಿಂಗಳು),
ದ್ವಿತೀಯ ಮಂಗಳೂರಿನ ಶೈಲೇಶ್, ಸ್ವಾತಿ ಶೆಟ್ಟಿ ದಂಪತಿ ಪುತ್ರ ಕಾನಿಷ್ಕ್ ಶೆಟ್ಟಿ(1 ವ),
ಬಂಟ್ವಾಳ ತಾಲೂಕಿನ ಪೆರ್ನೆ ಶಶಿಧರ್ ಗೌಡ, ವಿನುತಾ ದಂಪತಿ ಪುತ್ರಿ ಆಯುಷಿ( 2 ವ) ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ:- 3000/- ನಗದು, ಸ್ಮರಣಿಕೆ, ಪದಕ (Medal) ಹಾಗೂ ಪ್ರಮಾಣ ಪತ್ರ, ದ್ವಿತೀಯ:- 2000/- ನಗದು, ಸ್ಮರಣಿಕೆ, ಪದಕ ಹಾಗೂ ಪ್ರಮಾಣ ಪತ್ರ, ತೃತೀಯ:- 1000/- ನಗದು, ಸ್ಮರಣಿಕೆ, ಪದಕ ಹಾಗೂ ಪ್ರಮಾಣ ಪತ್ರ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮುದ್ದು ರಾಧೆ-ಕೃಷ್ಣರಿಗೆ ಪ್ರಮಾಣ ಪತ್ರ ನೀಡಲಾಗಿದೆ.
ಸ್ಪರ್ಧೆಯ ಪ್ರಾಯೋಜಕರು: ವೀಕ್ಷಕವಾಣಿ ʼರಾಧೆ-ಕೃಷ್ಣ 2023ʼ ಭಾವಚಿತ್ರ ಸ್ಪರ್ಧೆಗೆ ಅಕ್ಷಯ ಕಾಲೇಜು ಸಂಪ್ಯ, ಕಟೀಲು ಲಾಜಿಸ್ಟಿಕ್ಸ್ ಮಂಗಳೂರು, ಅವಿಜಿ ಇಂಗ್ಲೀಷ್ ಮೇಡಿಯಂ ಸ್ಕೂಲ್ ಬನ್ನೂರು ಕೃಷ್ಣನಗರ ಹಾಗೂ ಆರ್‌ಬಿಕೆಮ್ ಕೆಮಿಕಲ್ ವಾಟರ್ ಪ್ರೂಫಿಂಗ್ & ಫ್ಲೋರಿಂಗ್ ಪ್ರಾಯೋಜಕತ್ವ ನೀಡಿ ಸಹಕರಿಸಿದ್ದಾರೆ.