ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳನ್ನು ಪ್ರಧಾನಿ ಮೋದಿ ಟೀಕಿಸಿದರು.
ಪ್ರತಿಪಕ್ಷಗಳು ಈಗಲೂ ಹಳೆಯ ಪ್ರವೃತ್ತಿಯನ್ನು ಅನುಸರಿಸುತ್ತಿವೆ. ಅವರು ಅಧಿಕಾರದಲ್ಲಿದ್ದಾಗ ಯಾವ ಕೆಲಸವನ್ನೂ ಮಾಡಲಿಲ್ಲ. ಈಗ ಮಾಡುವವರನ್ನೂ ಟೀಕೆ ಮಾಡದೆ ಬಿಡಲ್ಲ. ನೂತನ ಸಂಸತ್ ಭವನ, ಕರ್ತವ್ಯ ಪಥ ಪುನರಾಭಿವೃದ್ಧಿ, ರಾಷ್ಟ್ರೀಯ ಯುದ್ಧ ಸ್ಮಾರಕ ಅಭಿವೃದ್ಧಿ ಎಲ್ಲವನ್ನೂ ವಿರೋಧಿಸುವ ಗುಣ ಅವರದ್ದು. ಆದರೆ ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದೆ ಎಂದರು.