ಉಪ್ಪಳ: ಸೇವಾ ಭಾರತಿ ಜೋಡುಕಲ್ಲು ತಪೋವನ ಇದರ ಆಶ್ರಯದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಜೋಡುಕಲ್ಲು ತಪೋವನ ಇದರ ನೇತೃತ್ವದಲ್ಲಿ 33ನೇ ವರ್ಷದ ಶ್ರೀ ಗಣೇಶೋತ್ಸವು ಸೆ. 19-20 ರಂದು ಜೋಡುಕಲ್ಲು ತಪೋವನದಲ್ಲಿ ಜರಗಿತು. ಸೆ.19ರಂದು ಬೆಳಗ್ಗೆ ಪ್ರತಿಷ್ಠಾ ಪೂಜೆ, ಗಣಪತಿ ಹವನ, ಭಜನಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ, ಮಹಾಪೂಜೆ ಮತ್ತು ರಾತ್ರಿ ರಂಗಪೂಜೆ ಪ್ರಸಾದ ವಿತರಣೆ ಬಳಿಕ ಸಂಘುಮಿತ್ರ ಜೋಡುಕಲ್ಲು ಇವರ ಪ್ರಾಯೋಜಕತ್ವದಲ್ಲಿ ಮಂಗಳೂರಿನ ಪ್ರಸಿದ್ಧ ಗಾಯಕರಿಂದ ಭಕ್ತಿ ರಸಮಂಜರಿ ಜರಗಿತು.
ಸೆ. 20ರಂದು ಬೆಳಗ್ಗೆ ಪ್ರಾತಃ ಪೂಜೆ ಮತ್ತು ಗಣಪತಿ ಹವನ ನಡೆದು ತುಳು ಯಕ್ಷಗಾನ ತಾಳಮದ್ದಳೆ ಮಹಿಳಾ ಯಕ್ಷಕೂಟ ಪೊನ್ನೆತೊಡ್ಡು ಕಯ್ಯಾರು ಇವರಿಂದ ಸತ್ಯನಾರಾಯಣ ವ್ರತ ಮಹಾತ್ಮೆ ಪ್ರಸಂಗ ಜರಗಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಪ್ರಸಾದ ನಡೆಯಿತು.
ಸಂಜೆ ಜಲಸ್ತಂಭನಾ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಯುವ ಭಾರತಿ ಸೇವಾ ಸಮಿತಿ ಬೋಳoಪಡಿ ಇದರ ವತಿಇಂದ 6 ಕುಣಿತ ಭಜನಾ ತಂಡಗಳಿಂದ 200 ಮಕ್ಕಳ ಕುಣಿತ ಭಜನೆ, ಚೆಂಡೆ, ನಾಸಿಕ್ ಮತ್ತು ಸಿಂಗಾರಿ ಮೇಳಗಳೊoದಿಗೆ ಬಹಳ ವಿಜ್ರಂಭಣೆಯಿಂದ ನೆರವೇರಿತು.