ಮಂಜೇಶ್ವರ: ಇಲ್ಲಿನ ವರ್ಕಾಡಿ ಪುರಾಣ ಪ್ರಸಿದ್ಧ ಶ್ರೀ ಕಾವೀಃ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಮಸ್ಕಾರ ಮಂಟಪದ ಶಿಲಾನ್ಯಾಸ ಕಾರ್ಯಕ್ರಮವು ಆ.24ರಂದು ಗುರುವಾರ ಪೂರ್ವಾಹ್ನ ಗಂಟೆ 10 ರಿಂದ 10.40 ರವರೆಗೆ ಜರಗಲಿದೆ.
ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿಯವರು ನಮಸ್ಕಾರ ಮಂಟಪದ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಕೃಷ್ಣರಾಜ ತಂತ್ರಿ, ಕುಡುಪು ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ ಎಂದು ಅಭಿವೃದ್ಧಿ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.