ಶಿವಾನಂದ ಕೋಟ್ಯಾನ್ ರಿಗೆ ‘ವಿಶ್ವಮಾನ್ಯ ಪ್ರಶಸ್ತಿ’ ಪ್ರಧಾನ

Share with

ಸೌದಿ ಅರೇಬಿಯಾ: 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2024 ಸೌದಿ ಅರೇಬಿಯಾದ ದಮಮ್ ನಲ್ಲಿ ಫೆ.8ರಂದು ಅದ್ಧೂರಿಯಾಗಿ ಸಂಪನ್ನವಾಯಿತು. ಓಮಾನ್ ಮಸ್ಕತ್ ನಲ್ಲಿರುವ ಅನಿವಾಸಿಗ ಶಿವಾನಂದ ಕೋಟ್ಯನ್ ರವರಿಗೆ ಕಲೆ, ಸಾಹಿತ್ಯ ಮತ್ತು ಚಲನಚಿತ್ರಗಳ ಆಯೋಜನೆ, ಸಹಾಯ- ಸಹಕಾರ ಸಮಾಜ ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿನ ಸೇವೆಯ ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ. 17ನೇ ವಿಶ್ವ ಕನ್ನಡ ಸಂಸ್ಕೃತಿಕ ಸಮ್ಮೇಳನ ಪ್ರಥಮ ಬಾರಿಗೆ ಸೌದಿ ಅರೇಬಿಯಾದಲ್ಲಿ ಜರುಗಿದ್ದು ಕನ್ನಡ ಭಾಷೆ, ನಡೆ ನುಡಿಯ ಬಗೆಗಿನ ಮನರಂಜನೆ, ಕವಿ ಗೋಷ್ಟಿ, ಯಕ್ಷಗಾನ ಕಾರ್ಯಕ್ರಮಗಳು ಜರಗಿತು.

ಮುಖ್ಯ ಅತಿಥಿಗಳಾಗಿ ಸಭಾಪತಿ ಯು.ಟಿ. ಖಾದರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಡಾ. ಆರತಿ ಕ್ರಷ್ಣ ಉಪಾಧ್ಯಕ್ಷರು ಅನಿವಾಸಿ ಕನ್ನಡಿಗರ ಕೋಶ, ಕರ್ನಾಟಕ ಸರಕಾರ, ಪುತ್ತೂರು ಶಾಶಕ ಅಶೋಕ್ ರೈ, ಜನಾಬ್ ರಹೀಮ್ ಖಾನ್ ಮಾನ್ಯ ಪೌರ ಆಡಳಿತ ಮತ್ತು ಹಜ್ ಖಾತೆ, ಪದ್ಮರಾಜ್ ಆರ್ ವಕೀಲರು ಮತ್ತು ಕೋಶಾಧಿಕಾರಿ ಗೋಕರ್ಣನಾಥ ಮಂದಿರ ಮಂಗಳೂರು, ಮಂಜುನಾಥ ಸಾಗರ್ ಸ್ಥಾಪಕ, ಅಧ್ಯಕ್ಷರು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಉಪಸ್ಥಿತಿಯಲ್ಲಿದ್ದರು.

ಆಯೋಜಕರಾದ ಜನಾಬ್ ಝಕರಿಯಾ ಬಜ್ಪೆ, ಜನಾಬ್ ಶೇಖ್ ಕರ್ನಿರೆ ಮತ್ತು ಶತೀಶ್ ಕುಮಾರ್ ಬಜಲ್ ಮತ್ತು ತಂಡ ಕನ್ನಡ ಸಮ್ಮೇಳನವನ್ನು ಏರ್ಪಡಿಸಿದ್ದರು.


Share with

Leave a Reply

Your email address will not be published. Required fields are marked *