ಉಡುಪಿ: ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ; ಕಾಂಗ್ರೆಸ್ ನಾಯಕ ಎಂ.ಜಿ.ಹೆಗಡೆ ಭಾವಚಿತ್ರಕ್ಕೆ ಎಲೆಅಡಿಕೆ ತಿಂದು ಉಗಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Share with

ಉಡುಪಿ: ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಭಯೋತ್ಪಾಧನಾ ವಿರೋಧಿ ವೇದಿಕೆ ವತಿಯಿಂದ ನಗರದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಮಾ.6ರಂದು ಪ್ರತಿಭಟನೆ ನಡೆಸಲಾಯಿತು.

ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಎಂ.ಜಿ.ಹೆಗಡೆ ಭಾವಚಿತ್ರಕ್ಕೆ ಉಗಿದು ಶಾಸಕ ಯಶ್ ಪಾಲ್ ಸಹಿತ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಎಫ್ ಎಸ್ ಎಲ್ ವರದಿಯಲ್ಲಿ ಆರೋಪ ಸಾಬೀತಾಗದಿದ್ದರೆ ಮಾಧ್ಯಮದವರ ಮುಖಕ್ಕೆ ಉಗಿಯಿರಿ ಎಂದು ಮಾಧ್ಯಮದವರನ್ನು ಎಂ.ಜಿ. ಹೆಗಡೆ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ದೇಶದ್ರೋಹ ಘೋಷಣೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಇದರಿಂದ ಆಕ್ರೋಶಗೊಂಡಿದ್ದ ಹಿಂದೂ ಕಾರ್ಯಕರ್ತರು, ಪ್ರತಿಭಟನೆಯ ಕೊನೆಯಲ್ಲಿ ಎಂ.ಜಿ ಹೆಗಡೆ ಭಾವಚಿತ್ರಕ್ಕೆ ಎಲೆ ಅಡಿಕೆ ತಿಂದು ಉಗುಳಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ, ಕಾಂಗ್ರೆಸ್ ಸರಕಾರದಲ್ಲಿ ಹಿಂದುಗಳ ಭಾವನೆಗೆ ನಿರಂತರವಾಗಿ ಧಕ್ಕೆ ತರಲಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ವಿಫಲವಾಗಿದೆ. ವೈಫಲ್ಯವನ್ನು ಮುಚ್ಚಿ ಹಾಕಲು ಇಂತಹ ಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತದೆ ಎಂದು ಗುಡುಗಿದರು.

ಪಾಕ್ ಪರ ಘೋಷಣೆ ಮಾಡಿಲ್ಲ ಎಂದು ಎಲ್ಲರೂ ಹೇಳಿಕೆ ಕೊಟ್ಟಿದ್ದರು. ಮಾಧ್ಯಮಗಳಿಗೆ ಕಾಂಗ್ರೆಸ್ ನಾಯಕರು ಸವಾಲುಗಳನ್ನು ಕೂಡ ಹಾಕಿದ್ದರು. ಸಚಿವರು ದೇಶದ್ರೋಹಿಗಳ ಪರವಾಗಿ ಮಾತುಗಳನ್ನಾಡಿಸಿದರು. Fslನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಸಾಭೀತಾಗಿದೆ. ಹೀಗಾಗಿ ಮಾ.6ರಂದು ಪ್ರತಿಭಟನೆ ಮಾಡಿ ವಿರೋಧಿಸಿದವರ ಭಾವಚಿತ್ರಕ್ಕೆ ಉಗಿದಿದ್ದೇವೆ ಎಂದರು.


Share with

Leave a Reply

Your email address will not be published. Required fields are marked *