ಉಪ್ಪಳ: ಕುಬಣೂರು ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಪ್ರತಿಷ್ಟಾ ಕಲಶ ಈ ತಿಂಗಳ 25ರಂದು ಬೆಳಿಗ್ಗೆ 11ಗಂಟೆಗೆ ನಡೆಯಲಿದೆ. ಇದರಂಗವಾಗಿ ಅಪರಾಹ್ನ 2.30ರಿಂದ ಶ್ರೀ ಮಹಮ್ಮಾಯೇ ಯಕ್ಷಗಾನ ಕಲಾಸಂಘ ಬಾಯಾರುಪದವು ಇವರಿಂದ ಅತಿಥಿ ಕಲಾವಿದರ ಸಹಕಾರದೊಂದಿಗೆ ಕರ್ಣಪರ್ವ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.


ಭಾಗವತರಾಗಿ ಜಿ.ಕೆ ನಾವಡ ಬಾಯಾರು, ಕುಮಾರಿ ಶ್ರೀವಿದ್ಯಾ ಐತಾಳ ಉಜಿರೆ, ಚಂಡೆ ಮದ್ದಳೆಯಲ್ಲಿ ರಾಮಮೂರ್ತಿ ಕುದ್ರೆಕೋಡ್ಲು, ಮಾಸ್ಟರ್ ಕೃಷ್ಣಚೈತನ್ಯ ಚೇರಾಲು, ಮುಮ್ಮೇಳದಲ್ಲಿ ಶಂಭು ಶರ್ಮ ವಿಟ್ಲ, ಅಶೋಕ ಭಟ್ ಉಜಿರೆ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪಾಡಿ, ವಸಂತ ಮಾಸ್ತರ್ ಉಪಸ್ಥಿತಿತರಿರುವರು.




