
ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ರಸ್ತೆ ದುರಸ್ಥಿ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 10ಗಂಟೆಯಿಂದ ಮೇ 5ರ ಸಂಜೆ 6ಗಂಟೆ ತನಕ ಒಂದು ವಾರಗಳ ಕಾಲ ಗೇಟ್ ಬಂದ್ ಮಾಡಲಾಗುವುದಾಗಿ ರೈಲ್ವೇ ಇಲಾಖೆ ಅಧಿಕಾರಿಗಳು ಗೇಟ್ ಮೂಲಕ ಪೋಸ್ಟರ್ ಲಗತ್ತಿಸಲಾಗಿದೆ. ಇನ್ನು ಕಾಮಗಾರಿ ಮುಗಿಯುವವರೆಗೆ ಬಸ್ ಸಹಿತ ವಾಹನ ಸಂಚಾರ ಮೊಟಕು ಗೊಳ್ಳಲಿದೆ. ಗೇಟ್ ರಸ್ತೆಗೆ ಇಂಟರ್ ಲಾಕ್ ಅವಳವಡಿಸಿ ಅಭಿವೃದ್ದಿಗೊಳಿಸಲಾಗುವುದು. ಜೊತೆಗೆ ಹಳೇ ಕಾಲದ ಗೇಟ್ನ್ನು ತೆಗೆದು ಹೊಸ ಗೇಟ್ನ್ನು ಸ್ಥಾಪಿಸುವ ಕೆಲಸಗಳು ನಡೆಯಲಿದೆ.

ಗೇಟ್ ಮುಚ್ಚುಗಡೆಯಿಂದ ಬಂಗ್ರಮoಜೇಶ್ವರ ಸಹಿತ ವಿವಿಧ ಪ್ರದೇಶಕ್ಕೆ ವಾಹನಗಳಲ್ಲಿ ತೆರಳಬೇಕಾದರೆ ಸುತ್ತಾಗಿ ಮಂಜೇಶ್ವರ ಸಮೀಪದ ಹತ್ತನೇ ಮೈಲು ಅಂಡರ್ ಪಾಸ್ ಮೂಲಕ ಸಾಗಬೇಕಾಗಿದೆ. ಮಂಜೇಶ್ವರ ಪೋಲೀಸ್ ಠಾಣೆ, ಬ್ಲೋಕ್ ಪಂಚಾಯತ್, ಪಂಚಾಯತ್, ವಿಲೇಜ್ ಆಫೀಸ್ ಸಹಿತ ಇತರ ಸರಕಾರಿ ಕಚೇರಿಗಳು, ಆರಾದಾನಾಲಯಗಳಿಗೆ ಹೊಸಂಗಡಿ ರೈಲ್ವೇ ಗೇಟ್ ಮೂಲಕ ಸಾಗಬೇಕಿದ್ದು, ಇದೀಗ ಗೇಟ್ ಮುಚ್ಚುಗಡೆಯಿಂದ ಸುತ್ತಾಗಿ ಸಾಗಬೇಕಾಗಿದೆ. ಕಾಮಗಾರಿಯನ್ನು ವಿಳಂಬಗೊಳಿಸದೆ ಶೀಘ್ರದಲ್ಲೇ ಮುಗಿಸಿ ಸಂಬoಧ ಪಟ್ಟ ರೈಲ್ವೇ ಇಲಾಖೆ ಅಧಿಕಾರಿಗಳು ಗೇಟ್ನ್ನು ತೆರೆದು ಸಂಚಾರಕ್ಕೆ ಅನುವುಮಾಡಿ ಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




