
ಜೋಡುಕಲ್ಲು: ಸೇವಾಭಾರತಿ ತಪೋವನ, ಜೋಡುಕಲ್ಲು ಇದರ ಆಶ್ರಯದಲ್ಲಿ ನಡೆಯುವ 34 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಸಮಿತಿ ರಚನಾ ಸಭೆಯು ಕೇಶವ ಶಿಶುಮಂದಿರ ತಪೋವನದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸೇವಾಭಾರತಿಯ ಅಧ್ಯಕ್ಷರಾದ ಶ್ರೀ ದಾಮೋದರ ಉಬರಳೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೇವಾಭಾರತಿಯ ಪ್ರಧಾನ ಕಾರ್ಯದರ್ಶಿಯವರಾದ ಶಿವಪ್ರಸಾದ್ ಶೆಟ್ಟಿ ಯವರು ಸ್ವಾಗತ ಭಾಷಣ ಮಾಡಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ರವಿರಾಜ್ ನ್ಯಾಕ್ ಗುಂಡಿಬೈಲು, ಉಪಾಧ್ಯಕ್ಷರುಗಳಾಗಿ ಸುದರ್ಶನ ಪಾಣಿ ಬಲ್ಲಾಳ್, ಸದಾನಂದ K.G ಅಟ್ಟೆಗೋಳಿ, ಸುರೇಶ್ ಅರಿಯಾಳ ಹಾಗೂ ಗೋಕುಲ್ ದಾಸ್ ಪಟ್ಲ,
ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಸನ್ನ ಅಟ್ಟೆಗೋಳಿ,
ಕಾರ್ಯದರ್ಶಿಗಳಾಗಿ ಅಜಿತ್ ಶೆಟ್ಟಿ ಕಳ್ಳಿಗೆ, ಪ್ರಶಾಂತ್ K.P ಪಟ್ಲ, ಚಂದ್ರಕಾಂತ ಶೆಟ್ಟಿ ದೇರಂಬಳ, ಪ್ರಕಾಶ್ ತಪೋವನ, ಕೋಶಾಧಿಕಾರಿಗಳಾಗಿ ಮಿಥುನ್ ಜೋಡುಕಲ್ಲು, ಕಾರ್ಯಾಲಯ ಕಾರ್ಯದರ್ಶಿಗಳಾಗಿ ಸಚಿನ್ ಜೋಡುಕಲ್ಲು, ಶಶಾಂಕ್ ಜೋಡುಕಲ್ಲು, ದೀಪಕ್ ಶೆಟ್ಟಿ ಕಯ್ಯಾರು, ಶ್ರೇಯ ಜೋಡುಕಲ್ಲು, ಸಹನಾ ಜೋಡುಕಲ್ಲು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಗಣೇಶ್ ಆಚಾರ್ಯ ಪಾಂಡ್ಯಡ್ಕ ಕಯ್ಯಾರು, ಹರೀಶ್ ಪಟ್ಲ, ಚಂದ್ರಹಾಸ ಪೊನ್ನೆತೋಡು, ಸತೀಶ್ ಅಟ್ಟೆಗೋಳಿ,
ಕ್ರೀಡಾ ಕಾರ್ಯದರ್ಶಿಗಳಾಗಿ ಲೋಕೇಶ್ ನೋಂಡ ಜೋಡುಕಲ್ಲು, ಪ್ರಶಾಂತ್ ಪಚ್ಚು ಪಟ್ಲ, ಗಿರೀಶ್ ಶೆಟ್ಟಿ ಓಪತಿಮೂಲೆ, ದೀಕ್ಷಿತ್ ನವೋದಯ ನಗರ, ಆದಿರಾ ಸಾಂತ್ಯೋಡು, ಮೇಘಶ್ರೀ ಬೀಡುಬೈಲು,
ಮಾತೃ ಸಮಿತಿ ಸದಸ್ಯರಾಗಿ ಕಮಲಾ ಬಾಲಕೃಷ್ಣ ಜೋಡುಕಲ್ಲು, ಲೀಲಾವತಿ ಪಟ್ಲ, ಶೋಭಾ ರಘುನಾಥ್ ಜೋಡುಕಲ್ಲು, ಸುರೇಖಾ ಜೆ ಆಳ್ವ ಸಣ್ಣತಡ್ಕ, ಪೂರ್ಣಿಮಾ ರಾಜೇಶ್ ಪಟ್ಲ, ಗೌರವ ಸಲಹೆಗಾರರಾಗಿ ಸುರೇಶ್ ಹೊಳ್ಳ ಕಯ್ಯಾರು, ಕೃಷ್ಣಪ್ಪ ಪೂಜಾರಿ ದೇರಂಬಳ, ನಾರಾಯಣ ಶೆಟ್ಟಿ ಬೊಳಂಪಾಡಿ, ವೆಂಕಪ್ಪ ಶೆಟ್ಟಿ ಕಯ್ಯಾರು, ರಾಜಾರಾಮ್ ಬಲ್ಲಾಳ್ ಚಿಪ್ಪಾರು, ಕೃಷ್ಣ ಅಟ್ಟೆಗೋಳಿ, ರವೀಂದ್ರ ಶೆಟ್ಟಿ ಮಡಂದೂರು, ಸದಾನಂದ ಶೆಟ್ಟಿ ಕೊಮ್ಮoಡ ಹಾಗೂ ರತ್ನಾಕರ ಶೆಟ್ಟಿ ದೇರಂಬಳ ಇವರನ್ನು ಆಯ್ಕೆ ಮಾಡಲಾಯಿತು.
34 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ವಿವಿಧ ವೈದಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸೇವಾಭಾರತಿಯ ಕಾರ್ಯದರ್ಶಿ ದೀಪಕ್ ಶೆಟ್ಟಿ ಕಯ್ಯಾರು ಕಾರ್ಯಕ್ರಮ ನಿರೂಪಿಸಿದರು, ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಅಟ್ಟೆಗೋಳಿ ಯವರು ವಂದಿಸಿದರು.





