ಹೊಸಂಗಡಿಯಲ್ಲಿ ನೂತನ ರೈಲ್ವೇ ಗೇಟ್ ಸ್ಥಾಪನೆ: ನಿಟ್ಟುಸಿರು ಬಿಟ್ಟ ಸಾರ್ವಜನಿಕರು

Share with


ಮಂಜೇಶ್ವರ :ಪದೇ ಪದೇ ಹಾನಿಗೀಡಾಗಿ ಮುರಿದು ಬೀಳುತ್ತಿರುವ ಹೊಸಂಗಡಿ ರೈಲ್ವೇ ಗೇಟ್‌ನ್ನು ಕೊನೆಗೂ ತೆರವುಗೊಳಿಸಿ ಹೊಸ ಗೇಟ್‌ನ್ನು ಸ್ಥಾಪಿಸಿರುವುದು ಸಾರ್ವಜನಿಕರಲ್ಲಿ ನೆಮ್ಮದಿಯನ್ನುಂಟುಮಾಡಿದೆ. ನೂತನ ಗೇಟ್‌ನ್ನು ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಥಾಪಿಸಲಾಗಿದೆ. ಈ ಹಿಂದೆ ಇದ್ದ ಗೇಟ್ ಕೈಯಿಂದ ತಿರಿಗುಸಿ ಹಾಕಲಾಗುತ್ತಿದೆ. ಇದೀಗ ಸ್ವಿಚ್ ಮೂಲಕ ಹಾಕುವ ವ್ಯವಸ್ಥಿಯೊಂದಿಗೆ ಮಾಡಲಾಗಿದೆ. ಈ ಹಿಂದಿನ ಗೇಟ್ ತುಕ್ಕು ಹಿಡಿದು ಶೋಚನೀಯವಸ್ಥೆಯಲ್ಲಿ ಪದೇ ಪದೇ ಮುರಿದು ಬೀಳುತ್ತಿತ್ತು, ಇದರಿಂದ ಗಂಟೆಗಳ ಕಾಲ ಗೇಟ್‌ನ್ನು ಬಂದು ಮಾಡಲಾಗುತ್ತಿದೆ. ಇದರಿಂದ  ಮಂಜೇಶ್ವರ ಒಳ ರಸ್ತೆಯಲ್ಲಿ ಸಂಚಾರ ಮೊಟಕುಗೊಂಡು  ಸಾರ್ವಜನಿಕರು ಸಂಕಷ್ಟಕ್ಕೀಡಾಗುತ್ತಿದ್ದರು.  ಈ ಹೊಸಗೇಟ್ ಈ ಹಿಂದೆ ಅಳವಡಿಸಲು ಸಿದ್ದತೆಗೊಳಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ಗೇಟ್ ಸಮೀಪದ ಮರದ ರೆಂಬೆ ಮುರಿದು ಬಿದ್ದು ಒಂದು ಗೇಟ್ ಹಾನಿಗೀಡಾಗಿದೆ. ಇದೀಗ  ಹೊಸಗೇಟ್ ಸ್ಥಾಪನೆಗೊಳಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.


Share with

Leave a Reply

Your email address will not be published. Required fields are marked *