ನವದೆಹಲಿ: ಜನಪ್ರಿಯ ಓಲ್ಡ್ ಮಾಂಕ್ ರಮ್‌ನ ಮೂರು ರೂಪಾಂತರಗಳ ಮಾರಾಟಕ್ಕೆ FSSAI ನಿರ್ಬಂಧ ವಿಧಿಸಿದೆ. ಮಹಾರಾಷ್ಟ್ರದ ನಿರ್ದಿಷ್ಟ ತಯಾರಿಕಾ ಘಟಕದಲ್ಲಿ ತಯಾರಾದ Old Monk The Legend, Old Monk Gold Reserve ಹಾಗೂ Old Monk XXX Matured Rum ಉತ್ಪನ್ನಗಳಿಗೆ ಈ ಕ್ರಮ ಅನ್ವಯವಾಗಲಿದೆ.

ಕೃತಕ/ನೇಚರ್-ಐಡೆಂಟಿಕಲ್ ಫ್ಲೇವರಿಂಗ್ ಬಳಕೆ ಹಾಗೂ ಲೇಬಲ್‌ನಲ್ಲಿ ತಪ್ಪುದಾರಿಗೆಳೆಯುವ ಮಾಹಿತಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ McDowell’s, Royal Challenge, Old Cask ಹಾಗೂ Bagpiper Deluxe ಸೇರಿದಂತೆ ಕೆಲವು ನಿರ್ದಿಷ್ಟ ಉತ್ಪನ್ನಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ.
ಆದರೆ ಓಲ್ಡ್ ಮಾಂಕ್ ಬ್ರ್ಯಾಂಡ್‌ನ ಎಲ್ಲಾ ಉತ್ಪನ್ನಗಳಿಗೂ ದೇಶವ್ಯಾಪಿ ನಿಷೇಧ ಹೇರಲಾಗಿಲ್ಲ ಎಂಬುದು ಗಮನಾರ್ಹ.




