ಯುವವಾಹಿನಿ ಪುತ್ತೂರು ಘಟಕದ ಪದಗ್ರಹಣ ಸಮಾರಂಭ

Share with

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಪುತ್ತೂರು ಘಟಕದ 2024-25 ನೇ ಸಾಲಿನ ಪದಗ್ರಹಣ ಸಮಾರಂಭ ಕಾರ್ಯಕ್ರಮ ಡಿ . 14ರಂದು ಪುತ್ತೂರು ಬಪ್ಪಳಿಗೆ ನಾರಾಯಣ ಗುರುಸ್ವಾಮಿ ಸಭಾಭವನ ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಜಯರಾಮ ಬಿ ಏನ್ ವಹಿಸಿದರು.

ನೂತನ ಅಧ್ಯಕ್ಷ ಅಣ್ಣಿ ಪೂಜಾರಿಯವರು ಮಾತನಾಡಿ ಘಟಕದ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು. ಮುಂದೆ ಎಲ್ಲರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಬಿ ಟಿ ಮಹೇಶ್ಚಂದ್ರ ಸಾಲ್ಯಾನ್ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದಕ್ಕೆ ಘಟಕದ ವತಿಯಿಂದ ಸನ್ಮಾನ ನಡೆಯಿತು. ಈ ಸಂದರ್ಭದಲ್ಲಿ ಘಟಕದ 2023-24 ನೇ ಸಾಲಿನ ಪದಾಧಿಕಾರಿಗಳು/ನಿರ್ದೇಶಕರುಗಳಿಗೆ ಅಧ್ಯಕ್ಷರು ಸ್ಮರಣಿಕೆಯನ್ನು ನೀಡಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ಘಟಕದ ಅಧ್ಯಕ್ಷರಾದ ಜಯರಾಮ್ ಬಿ ಏನ್ ಮಾತನಾಡಿ ಒಂದು ವರ್ಷದಲ್ಲಿ ಅನೇಕ ಕಾರ್ಯಕ್ರಮ ಮಾಡಿರುವುದು ನಮಗೆ ಹೆಮ್ಮೆಯಿದೆ ಹಾಗೂ ಹಲವು ವರುಷಗಳ ನಂತರ ನಡೆದ ಸಮಾಜ ಬಾಂಧವರಿಗಾಗಿ ಪುತ್ತೂರು ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದೆ. ಪ್ರತಿಯೊಂದು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಘಟಕದ ಪದಾಧಿಕಾರಿಗಳಿಗೆ, ನಿರ್ದೇಶಕರುಗಳಿಗೆ, ಸದಸ್ಯರಿಗೆ ಘಟಕದ ಮಾಜಿ ಅಧ್ಯಕ್ಷರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು ಹಾಗೆಯೇ ಮುಂದಿನ ನೂತನ ತಂಡಕ್ಕೆ ಶುಭಾಶಯ ಕೋರಿ ತನ್ನಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಹಾಲಿಂಗೇಶ್ವರ ಐ ಟಿ ಐ ನ ಉಪನ್ಯಾಸಕ ನಾರಾಯಣ ಪೂಜಾರಿ ಪಂಜಳ ಹಾಗೂ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕ ಜಯಂತ್ ಬರಿಮಾರ್, ವೇದಿಕೆಯಲ್ಲಿ ಘಟಕದ ಕಾರ್ಯದರ್ಶಿ ಸಮಿತ್. ಪಿ ಉಪಸ್ಥಿತರಿದ್ದರು.

2023-24ನೇಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸಮಿತ್. ಪಿ ವಾಚಿಸಿದರು.ನೂತನ ತಂಡದ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾ ಅಧಿಕಾರಿ ಉಮೇಶ್ ಬಾಯರ್ ಓದಿದರು.ಚುನಾವಣಾ ಅಧಿಕಾರಿಯವರಿಗೆ ಅಧ್ಯಕ್ಷರಾದ ಜಯರಾಮ್ ಬಿ ಏನ್ ಶಾಲು ಹಾಕಿ ಅಭಿನಂದನದಿಸಿದರು.ತಂಡಕ್ಕೆ ಪ್ರತಿಜ್ಞಾ ವಿಧಿಯನ್ನು ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷ ಲೋಕೇಶ್ ಕೋಟ್ಯಾನ್ ಕುಳೂರ್ ಬೋಧಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಘಟಕ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ನಿರ್ದೇಶಕರುಗಳು ಸರ್ವ ಸದಸ್ಯರು ಹಾಗೂ ಬಿಲ್ಲವ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು . ನೂತನ ಕಾರ್ಯದರ್ಶಿ ಶರತ್ ಸಾಲ್ಯಾನ್ ಧನ್ಯವಾದ ಸಮರ್ಪಿಸಿದರು.


Share with

Leave a Reply

Your email address will not be published. Required fields are marked *