ಕಾಸರಗೋಡು: ಕೂಡ್ಲು ಬುಳಾರ್ಕೋಡು ಸ್ವಾಮಿ ಕೊರಗ ತನಿಯ ಸನ್ನಿಧಿಯಲ್ಲಿ ಡಿ.28ರಂದು ಎರಡನೇ ವರ್ಷದ ವಾರ್ಷಿಕೋತ್ಸವ ಡಿ. 28ರಂದು ಜರಗಲಿದೆ. ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, ಶುದ್ದಿ ಕಲಶ, 11ಗಂಟೆಗೆ ಗುಳಿಗ ಕೋಲ, 12.30 ಕ್ಕೆ ಅನ್ನದಾನ, ಸಂಜೆ 7 ಗಂಟೆಗೆ ಭಜನೆ, ರಾತ್ರಿ 8 ಗಂಟೆಗೆ ಕೊರಗಜ್ಜನ ಭಂಡಾರ ಆಗಮನ, 9 ಗಂಟೆಗೆ ಅನ್ನದಾನ, 9.30 ಕ್ಕೆ ಕೊರಗಜ್ಜನ ಕೋಲ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಲಿದೆ.


ಡಿ.31ರಂದು ಬೆಳಗ್ಗೆ ಹಾಗೂ ರಾತ್ರಿ ವಾರ್ಷಿಕ ದಿನದ ಅಂಗವಾಗಿ ವಿಶೇಷ ಪೂಜೆ ಇರಲಿದೆ ಎಂದು ದೈವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.




