ಚಿಕ್ಕಮುಡ್ನೂರು: ಅಶ್ವ ಫ್ರೆಂಡ್ಸ್ (ರಿ.) ವತಿಯಿಂದ ಕೃಷ್ಣಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ, ಆಟೋಟ ಸ್ಪರ್ಧೆ

Share with

ಪುತ್ತೂರು: ಅಶ್ವ ಫ್ರೆಂಡ್ಸ್ (ರಿ.) ಬೀರನಹಿತ್ಲು ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಮೊಸರು ಕುಡಿಕೆ ಉತ್ಸವ–2026 ಸೆಪ್ಟೆಂಬರ್ 6ರಂದು ಚಿಕ್ಕಮುಡ್ನೂರು ಶಾಲೆಯಲ್ಲಿ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ಸೂರ್ಯನಾರಾಯಣ ಭಟ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಶ್ವ ಫ್ರೆಂಡ್ಸ್(ರಿ.) ಅಧ್ಯಕ್ಷ ವಿಶ್ವನಾಥ ಗೌಡ ಅನಂತಿಮಾರು ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಸಂಪತ್ ಕುಮಾರ್ ಜೈನ್, ಸುಂದರ ಪೂಜಾರಿ ಬಡಾವು,ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಲೋಬೊ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು.

ಅಶ್ವ ಫ್ರೆಂಡ್ಸ್ ನ ಗೌರವಾಧ್ಯಕ್ಷ ಉದ್ಯಮಿ ರಾಜು ಶೆಟ್ಟಿ, SDMC ಅಧ್ಯಕ್ಷೆ ಸುನೀತಾ, ಶೀನಪ್ಪ ಪೂಜಾರಿ ಆರಿಗ, ಸುರೇಂದ್ರ ಪೂಜಾರಿ ಬಡಾವು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅಶ್ವ ಫ್ರೆಂಡ್ಸ್ ನ ಕಾರ್ಯದರ್ಶಿ ವಸಂತ್ ಪೂಜಾರಿ ಅನಂತಿಮಾರು ವಂದಿಸಿದರು. ಅಣ್ಣಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟಕ್ಕೆ ತೆಂಗಿನ ಕಾಯಿ ಹೊಡೆಯುವುದರ ಮೂಲಕ ಏರಿಗೆ ಶೀನಪ್ಪ ಪೂಜಾರಿಯವರು ಚಾಲನೆ ನೀಡಿದರು.

ಗಮನ ಸೆಳೆದ ಮುದ್ದು ರಾಧಾ ಕೃಷ್ಣರು:
ಅಶ್ವ ಫ್ರೆಂಡ್ಸ್ ವತಿಯಿಂದ ಮೊದಲ ಬಾರಿ ನಡೆದ ಅಷ್ಟಮಿ ಕ್ರೀಡಾಕೂಟದಲ್ಲಿ ಪುಟಾಣಿ ಮಕ್ಕಳಿಗೆ ಮುದ್ದು ರಾಧಾ ಕೃಷ್ಣರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 25 ಕ್ಕೂ ಹೆಚ್ಚು ಪುಟಾಣಿಗಳು ಭಾಗವಹಿಸಿದರು.

ಉಳಿದಂತೆ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ನೂರಾರು ಮಂದಿ ಭಾಗವಹಿಸುವ ಮೂಲಕ ಮೆರುಗು ತಂದರು.

ಅಶ್ವ ಫ್ರೆಂಡ್ಸ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


Share with

Leave a Reply

Your email address will not be published. Required fields are marked *