ಭಾರತಕ್ಕೆ ಹೆಮ್ಮೆ ತಂದಿತ್ತ ‘ನಾಟಿ ಬಾಯ್’; ಈ ಜಿಎಸ್ಎಲ್ವಿ ರಾಕೆಟ್ನ ಯಶಸ್ವಿ ಉಡ್ಡಯನಕ್ಕೆ ಇಸ್ರೋ ಇಷ್ಟು ಗರ್ವ ಪಡುತ್ತಿರುವುದು ಯಾಕೆ?

Share with

ಶ್ರೀಹರಿಕೋಟ, ಸೆಪ್ಟೆಂಬರ್ 4: ಇಸ್ರೋ ಇಂದು ಶುಕ್ರವಾರ ಭೂ ಪರಿವೀಕ್ಷಣಾ ಉಪಗ್ರಹ ಹೊತ್ತ ಜಿಎಸ್ಎಲ್ವಿ ರಾಕೆಟ್ (GSLV-F17) ಅನ್ನು ಉಡಾವಣೆ ಮಾಡಿ ಜಗತ್ತಿನ ಗಮನ ಸೆಳೆದಿದೆ. ನಾಟಿ ಬಾಯ್ (Naughty Boy) ಎಂದೇ ಖ್ಯಾತವಾಗಿರುವ ಈ ರಾಕೆಟ್ ಉಡಾವಣೆ ಯಶಸ್ವಿಯಾಗಿರುವುದಕ್ಕೆ ಇಸ್ರೋ ಗರ್ವ ಪಟ್ಟುಕೊಂಡಿದೆ. ಈ ರಾಕೆಟ್ನ ಯಶಸ್ವಿ ಉಡಾವಣೆಯಲ್ಲಿ ಗರ್ವ ಪಟ್ಟುಕೊಳ್ಳುವಂಥದ್ದು ಏನಿದೆ? ನಾಟಿ ಬಾಯ್ ಅದರ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಘಟನೆ ಸಾಮಾನ್ಯವಲ್ಲ. ಭಾರತಕ್ಕೆ ತಂದಿತ್ತಿರುವ ದೊಡ್ಡ ಗೆಲುವು ಅದು.


ಇಸ್ರೋ ಸಂಸ್ಥೆ ಪಿಎಸ್ಎಲ್ವಿ ಮತ್ತು ಜಿಎಸ್ಎಲ್ವಿ ಎಂಬ ಎರಡು ಸರಣಿಯ ರಾಕೆಟ್ಗಳನ್ನು ತಯಾರಿಸುತ್ತದೆ. ಪಿಎಸ್ಎಲ್ವಿ ಸಣ್ಣ ತೂಕವನ್ನು ಹೊತ್ತೊಯ್ಯಬಲ್ಲ ರಾಕೆಟ್ಗಳು. ಜಿಎಸ್ಎಲ್ವಿ ರಾಕೆಟ್ಗಳು ದೊಡ್ಡ ತೂಕದ ಸೆಟಿಲೈಟ್ಗಳನ್ನು ಹೊತ್ತೊಯ್ಯಬಲ್ಲುವು. ಪಿಎಸ್ಎಲ್ವಿ ರಾಕೆಟ್ಗಳು ಶೇ. 95ಕ್ಕಿಂತ ಹೆಚ್ಚು ಸಕ್ಸಸ್ ರೇಟ್ ಅಥವಾ ಯಶಸ್ಸಿನ ಪ್ರಮಾಣ ಹೊಂದಿವೆ. ಅಂದರೆ, ಉಡಾವಣೆಗೊಂಡ ನೂರು ರಾಕೆಟ್ಗಳಲ್ಲಿ 95 ಯಶಸ್ವಿಯಾಗಿವೆ. ಆದರೆ, ಇಷ್ಟು ವಿಶ್ವಾಸಾರ್ಹವೆನಿಸಿದ್ದ ಪಿಎಸ್ಎಲ್ವಿ ರಾಕೆಟ್ಗಳ ಉಡಾವಣೆ 2025 ಮತ್ತು 2026ರಲ್ಲಿ ಸತತ ವೈಫಲ್ಯ ಕಂಡವು. ಇದು ಇಸ್ರೋದ ಕ್ಷಮತೆಗೆ ತಂದ ಕಳಂಕವಾಗಿತ್ತು. ಈಗ ಜಿಎಸ್ಎಲ್ವಿ ರಾಕೆಟ್ನ ಯಶಸ್ವಿ ಉಡಾವಣೆಯು ಇಸ್ರೋದ ಆ ಕಳಂಕ ನೀಗಿಸಿರಬಹುದು.


ಕೇಂದ್ರ ಸಚಿವ ಜಿತೇಂದರ್ ಸಿಂಗ್ ಅವರ ಎಕ್ಸ್ ಪೋಸ್ಟ್



‘ನಾಟಿ ಬಾಯ್’ ರಾಕೆಟ್ ಅಂತ ಕರೆಯುವುದ್ಯಾಕೆ?
ಜಿಎಸ್ಎಲ್ವಿ ರಾಕೆಟ್ಗಳು ಮೊದಲಿಂದಲೂ ಯಶಸ್ಸಿನ ಜೊತೆಗೆ ವೈಫಲ್ಯಗಳನ್ನೂ ಅನುಭವಿಸುತ್ತಾ ಬಂದಂಥವು. ಪಿಎಸ್ಎಲ್ವಿ ರಾಕೆಟ್ನ 19 ಉಡ್ಡಯನದಲ್ಲಿ ಆರು ವಿಫಲವಾಗಿವೆ. ಸಂಕೀರ್ಣವಾದ ಕ್ರಯೋಜೆನಿಕ್ (Cryogenic Stage) ತಂತ್ರಜ್ಞಾನವನ್ನು ಬಳಸುವ ಈ ರಾಕೆಟ್ ಅತ್ಯಂತ ಪ್ರಭಾವಶಾಲಿಯಾಗಿದ್ದರೂ, ನಿರೀಕ್ಷಿತ ಫಲಿತಾಂಶ ನೀಡುವುದು ಸವಾಲಾಗಿತ್ತು. ಹೀಗಾಗಿ ಬಾಹ್ಯಾಕಾಶ ವಿಜ್ಞಾನಿಗಳು ಇದನ್ನು ‘ನಾಟಿ ಬಾಯ್’ ಎಂದು ತಮಾಷೆಯಾಗಿ ಕರೆಯುತ್ತಿದ್ದರು. ಆದರೆ ಈ ಉಡ್ಡಯನದ ಯಶಸ್ಸಿನೊಂದಿಗೆ GSLV ತನ್ನ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಸಾಬೀತುಪಡಿಸಿದೆ.

ಇದನ್ನೂ ಓದಿ: ಬಿರುಗಾಳಿ, ಮಳೆಯ ನಡುವೆ ಬಾಹ್ಯಾಕಾಶಕ್ಕೆ ಜಿಗಿದ ಜಿಎಸ್‌ಎಲ್‌ವಿ ರಾಕೆಟ್,26 ಸಾವಿರ ಕಿ.ಮೀ ಎತ್ತರದಿಂದ ಭಾರತದ ಮೇಲೆ ನಿರಂತರ ಹದ್ದಿನ ಕಣ್ಣು

ಭಾರತಕ್ಕೆ ಈ ಜಿಎಸ್ಎಲ್ವಿ ಎಫ್-17 ರಾಕೆಟ್ ಉಡಾವಣೆಯ ಮಹತ್ವವೇನು?
ಸ್ವದೇಶಿ ಕ್ರಯೋಜೆನಿಕ್ ತಂತ್ರಜ್ಞಾನದ ಪ್ರಾಬಲ್ಯ: ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವು ಅತ್ಯಂತ ಸಂಕೀರ್ಣವಾದದ್ದಾಗಿದ್ದು, ವಿಶ್ವದ ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿದೆ. ಈ ಯಶಸ್ಸು ಭಾರತದ ಸ್ವದೇಶಿ ತಂತ್ರಜ್ಞಾನ ಮತ್ತು ವಿಜ್ಞಾನಿಗಳ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದೆ.
ಹವಾಮಾನ ಹಾಗೂ ವಿಪತ್ತು ನಿರ್ವಹಣೆ ಸುಧಾರಣೆ: ಈ ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಾದ ಸುಧಾರಿತ ಉಪಗ್ರಹವು ಭಾರತದ ಹವಾಮಾನ ಮುನ್ಸೂಚನೆ, ಚಂಡಮಾರುತ, ಪ್ರವಾಹ ಹಾಗೂ ವಿಕೋಪಗಳ ನಿಖರ ಮುನ್ಸೂಚನೆ ನೀಡಲು ಸಹಕಾರಿಯಾಗಲಿದೆ. ಇದರಿಂದ ಕರಾವಳಿ ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
ಭಾರೀ ತೂಕದ ಉಪಗ್ರಹ ಉಡ್ಡಯನ ಸಾಮರ್ಥ್ಯ: ಭಾರೀ ತೂಕದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಭಾರತವು ಹಿಂದೆ ವಿದೇಶಿ ಏಜೆನ್ಸಿಗಳ ಮೇಲೆ ಅವಲಂಬಿತವಾಗಿರಬೇಕಿತ್ತು. GSLV ಯಶಸ್ಸಿನಿಂದಾಗಿ ಈಗ ಭಾರತವೇ ಸ್ವತಂತ್ರವಾಗಿ 2 ಟನ್‌ಗಿಂತಲೂ ಹೆಚ್ಚು ತೂಕದ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ (Geostationary Orbit) ತಲುಪಿಸಬಲ್ಲದು.
ಕಮರ್ಷಿಯಲ್ ಮಾರುಕಟ್ಟೆಯಲ್ಲಿ ಭಾರತದ ಹವಾ: ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಕನಿಷ್ಠ ವೆಚ್ಚದಲ್ಲಿ ಉಪಗ್ರಹಗಳನ್ನು ಉಡ್ಡಯನ ಮಾಡುವಲ್ಲಿ ಇಸ್ರೋ ಹೆಸರುವಾಸಿಯಾಗಿದೆ. GSLV ಯಶಸ್ಸಿನಿಂದ ವಿದೇಶಿ ಉಪಗ್ರಹಗಳನ್ನು ಭಾರತೀಯ ನೆಲದಿಂದಲೇ ಉಡ್ಡಯನ ಮಾಡುವ ವಾಣಿಜ್ಯ ಅವಕಾಶಗಳು ಮತ್ತಷ್ಟು ಹೆಚ್ಚಲಿವೆ.


Share with

Leave a Reply

Your email address will not be published. Required fields are marked *