ಕುಂಭಮೇಳ ವ್ಯವಸ್ಥೆಗಳ ಬಗ್ಗೆ ಸುಧಾಮೂರ್ತಿ ಶ್ಲಾಘನೆ

Share with

ಪ್ರಯಾಗ್‌ರಾಜ್’ ಮಹಾ ಕುಂಭಮೇಳದ ವ್ಯವಸ್ಥೆಗಳ ಬಗ್ಗೆ ರಾಜ್ಯಸಭಾ ಸಂಸದೆ ಸುಧಾಮೂರ್ತಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕುಂಭಮೇಳ ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ & ಡಿಜಿಟಲ್ ಎಂದು ಬಣ್ಣಿಸಿದ್ದಾರೆ. ಮಹಾಕುಂಭ ವ್ಯವಸ್ಥೆಗಳ ಮಾದರಿಯು ಇತರ ಸರ್ಕಾರಗಳು ಅನುಸರಿಸಲು ಮಾನದಂಡವಾಗಿ ಕಾರ್ಯನಿರ್ವಹಿಸಬಹುದು ಎಂದಿದ್ದಾರೆ.

ಸೋಮವಾರ ಮಹಾಕುಂಭದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ಗೆ ಆಗಮಿಸಿದ್ದ ಸುಧಾಮೂರ್ತಿ, ಕಾರ್ಯಕ್ರಮದ ವ್ಯವಸ್ಥೆ ಮತ್ತು ಸಂಘಟನೆಯಿಂದ ಪ್ರಭಾವಿತರಾಗಿದ್ದಾರೆ.


Share with