ಅಕ್ರಮವಾಗಿ ಮರಳು ಸಾಗಾಟ:2  ಟಿಪ್ಪರ್‌ ವಶಕ್ಕೆ ಪಡೆದ ಪೊಲೀಸರು

Share with

ಕಾರ್ಕಳ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 2 ಟಿಪ್ಪರ್‌ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದೆದು, ಚಾಲಕರು ಪರಾರಿಯಾದ ಘಟನೆ ಮಾ. 9ರಂದು ನಡೆದಿದೆ.


ಉಳ್ಳಾಲ
ಕಾರ್ಕಳ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ (ತನಿಖೆ) ಶಿವಕುಮಾರ್ ಎಸ್. ಆರ್. ಅವರು ಕಸಬಾ ಗ್ರಾಮದ ಸರ್ವಜ್ಞ ಸರ್ಕಲ್ ಬಳಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಪುಲ್ಕೇರಿ ಬೈಪಾಸ್ ಕಡೆಯಿಂದ 2 ಟಿಪ್ಪರ ಲಾರಿಗಳು ಬರುತ್ತಿದ್ದು ನಿಲ್ಲಿಸುವಂತೆ ಸೂಚನೆ ನೀಡಿದಾಗ ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಅದರ ಚಾಲಕರು ಟಿಪ್ಪರ್‌ ಲಾರಿಯಿಂದ ಇಳಿದು ಪರಾರಿಯಾಗಿದ್ದಾರೆ. ಟಿಪ್ಪರ್‌ ಲಾರಿಗಳನ್ನು ಪರಿಶೀಲಿಸಲಾಗಿ ಎಲ್ಲಿಯೋ ಸರಕಾರಿ ಸ್ಥಳದಿಂದ ಮರಳನ್ನು ಕಳವು ಮಾಡಿ KA-19-AD-0602 ಹಾಗೂ KA-19-D-5716ನೇ ನಂಬ್ರದ ಟಿಪ್ಪರ ಲಾರಿಗಳಲ್ಲಿ ತಲಾ 3 ಯೂನಿಟ್‌ ಮರಳನ್ನು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *