ಕಾಸರಗೋಡು: ಸೂರ್ಯಾಘಾತದಿಂದ ವೃದ್ಧರೋರ್ವರು ಸಾವನ್ನಪ್ಪಿರುವ ಘಟನೆ ಮಾ.8 ರಂದು ಚಿಮೇನಿ ಸಮೀಪದ ತಿಮಿರಿ ಎಂಬಲ್ಲಿ ನಡೆದಿದೆ.
ತಿಮಿರಿಯ ಕುಂಞಿ ಕಣ್ಣನ್ (92) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮನೆಯಿಂದ ಹೊರ ತೆರಳಿದ್ದ ಕುಂಞಿ ಕಣ್ಣನ್ ವಾಪಸ್ ಬಾರದ ಹಿನ್ನಲೆಯಲ್ಲಿ ಅವರ ಪತ್ನಿ ಹುಡುಕಿದಾಗ ದಾರಿಯಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಅವರು ಮೃತಪಟ್ಟಿದ್ದರು. ದೇಹದಲ್ಲಿ ಸುಟ್ಟ ಗಾಯಗಳು ಕಂಡುಬಂದಿವೆ. ಸೂರ್ಯಘಾತ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.





