
ಹೊಸದಿಲ್ಲಿ: ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ರಂದು ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ವ್ಯವಹಾರ-ವಹಿವಾಟು ನಡೆಯುತ್ತದೆ .

ಹಣಕಾಸಿನ ರಿಪೋರ್ಟಿನಲ್ಲಿ ಯಾವುದೇ ವ್ಯತ್ಯಾಸ ಬರದಂತೆ ಕಂಟ್ರೋಲ್ ಮಾಡಲು ಆರ್ ಬಿಐ ಎಲ್ಲಾ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ.
ಹಣಕಾಸು ವರ್ಷದ ಕೊನೆ ದಿನವಾಗಿರುವುದರಿಂದ ವಹಿವಾಟಿನ ಲೆಕ್ಕವನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದರಿಂದ ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ.




