
ಕಾಸರಗೋಡು: ಬಿಎಂಎಸ್ ಕಾರ್ಯಕರ್ತ, ಅಣಂಗೂರು ಜೆ.ಪಿ.ಕಾಲನಿಯ ಜ್ಯೋತಿಷ್ ಅವರನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಎಸ್‌ಡಿಪಿಐ ಕಾರ್ಯಕರ್ತರಾದ ರಫೀಕ್ ಅಣಂಗೂರು, ಹಮೀದ್ ಕಡಪ್ಪುರ, ಸಾಬೀರ್ ಚೇರಂಗೈ ಮತ್ತು ಅಶ್ರಫ್ ಅಣಂಗೂರು ಅವರನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

2017ರ ಆ.10ರಂದು ಜ್ಯೋತಿಷ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಕೊಲೆಗೈಯಲು ಯತ್ನಿಸಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.




