
ಪೈವಳಿಕೆ : ಮಂಜೇಶ್ವರ ಮಂಡಲ ಸಮಿತಿ ಸದಸ್ಯ ಕೆ ಪಿ ಪ್ರಶಾಂತ್ ರನ್ನು ಪಕ್ಷದಿಂದ ಅಮಾನತು ಮಾಡಿರುವ ಜಿಲ್ಲಾಧ್ಯಕ್ಷೆ ಯ ಸರ್ವಧಿಕಾರ ಧೋರಣೆ ಪಕ್ಷದ ಆಂತರಿಕ ಬಿನ್ನಾಭಿಪ್ರಾಯ ಕ್ಕೆ ಕಾರಣವಾಗುತ್ತಿದೆ.
ಪ್ರಾಥಮಿಕ ಸದಸ್ಯತ್ವ ದಿಂದ ಕಾರ್ಯಕರ್ತರು ಗಳನ್ನು ಅಮಾನತು ಮಾಡಲು ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ಬಿಜೆಪಿ ಸಂವಿದಾನದಲ್ಲಿ ಅಧಿಕಾರ ಇಲ್ಲ ಆದಕಾರಣ ಇಲ್ಲದ ಅಧಿಕಾರ ಉಪಯೋಗಿಸಿ ಅನೇಕ ವರ್ಷ ಗಳಿಂದ ಪಕ್ಷದಲ್ಲಿ ದುಡಿಯುವ ಯುವಕರನ್ನು ಏಕ ಏಕಿ ಅಮಾನತು ಮಾಡಿ ಪತ್ರಿಕಾ ಹೇಳಿಕೆ ಕೊಟ್ಟು ಪ್ರಚಾರ ಕ್ಕಾಗಿ ಅಧ್ಯಕ್ಷರ ನಡವಳಿಕೆ ಸರಿಯಲ್ಲ, ಅಮಾನತು ಮಾಡಲದ kp ಪ್ರಶಾಂತ್ ರಿಗೆ ಇದುವರೆಗೂ ಅಧಿಕೃತ ಅಮಾನತು ಆದೇಶ ಸಿಕ್ಕಿಲ್ಲ.
ಜಿಲ್ಲಾ ಅಧ್ಯಕ್ಷರ ಬೇಜವಾಬ್ದಾರಿ ತನ, ಅನುಭವದ ಕೊರತೆ ಪಕ್ಷದ ಬೆಳವಣಿಗೆಗೆ ಹಾನಿ ಆಗುತ್ತಿದೆ ಎಂಬ ಮಾತುಗಳು ಕೇಳುತಿದೆ.
ಇಲ್ಲದ ಅಧಿಕಾರ ಚಲಾಯಿಸಿದ ಜಿಲ್ಲಾ ಅಧ್ಯಕ್ಷೆ ಅಮಾನತು ಆದೇಶ ವಾಪಾಸ್ ಪಡೆಯಬೇಕು, ಮತ್ತೆ ಮಂಡಲ ಸಮಿತಿಯಲ್ಲಿ ಪ್ರಶಾಂತ್ ರನ್ನು ಸೇರಿಸಬೇಕು ಇಲ್ಲವಾದಲ್ಲಿ ಪಂಚಾಯತ್ ಚುನಾವಣೆ ಯಲ್ಲಿ ಇದಕ್ಕೆ ಉತ್ತರ ನೀಡಲು ಬಿಜೆಪಿ ಯಲ್ಲೇ ಯುವ ಸಮುದಾಯ ಮುಂದಾಗಲಿದೆ ಎಂದು ಕಾಯರ್ ಕಟ್ಟೆ ಯಲ್ಲಿ ಸೇರಿದ ಕಾರ್ಯಕರ್ತರು ಗಳ ಅಭಿಪ್ರಾಯ.
ಸಭೆಯಲ್ಲಿ ಪೈವಳಿಕೆ ಯುವಮೋರ್ಚಾ ಮಾಜಿ ಅಧ್ಯಕ್ಷ ಮನು ಪೆರ್ವೋಡಿ,ಯುವ ಮೋರ್ಚಾ ಮಾಜಿ ಕಾರ್ಯದರ್ಶಿ ಸಂತೋಷ್ ಬಾಯರ್, sc ಮೋರ್ಚಾ ಮಾಜಿ ನೇತಾರ ಸುನಿಲ್,ರಂಜಿತ್ ವೇಣುಗೋಪಾಲ್, ಜೀವನ ಬನ್ರೀ ಹಾಗೂ ಯುವ ನೇತಾರರು ಉಪಸ್ಥಿತರಿದ್ದರು.





