ಕಾಸರಗೋಡು: ಹಲಸಿನ ಹಣ್ಣು ಕತ್ತರಿಸುವಾಗ ಕತ್ತಿ ತಲೆಗೆ ಬಡಿದು 8 ವರ್ಷದ ಬಾಲಕ ಸಾವು !

Share with

ಕಾಸರಗೋಡು :ಹಲಸಿನ ಹಣ್ಣು ಕತ್ತರಿಸುವಾಗ ಆಕಸ್ಮಿಕವಾಗಿ ಕತ್ತಿ ತಲೆಗೆ ಬಡಿದು 8 ವರ್ಷದ ಬಾಲಕ ಸಾವನ್ನಪ್ಪಿರುವ ಘೋರ ದುರಂತ ಸಂಭವಿಸಿದೆ.

ಕಾಸರಗೋಡಿನ ವಿದ್ಯಾನಗರ ಠಾಣಾ ವ್ಯಾಪ್ತಿಯ ಪಾಡಿ ಬೆಳ್ಳೂರಡ್ಕ ಎಂಬಲ್ಲಿ ಈ ಘಟನೆ ನಡೆದಿದೆ.ಮೃತನನ್ನು ಹುಸೈನ್ ಶಹಬಾಸ್ (8) ಎಂದು ತಿಳಿದುಬಂದಿದೆ.ತಾಯಿ ಜೊತೆ ಆಲಂಪಾಡಿ ಬೆಳ್ಳೂರಡ್ಕದಲ್ಲಿರುವ ಅಜ್ಜಿ ಮನೆಗೆ ಹುಸೈನ್ ಬಂದಿದ್ದನು. ತಾಯಿ ಅಡುಗೆ ಕೋಣೆ ಹೊರಗಡೆ ಮುಟ್ಟು ಕತ್ತಿ ಯಲ್ಲಿ ಹಲಸಿನ ಹಣ್ಣು ತುಂಡರಿಸುತ್ತಿದ್ದರು.

ಈ ವೇಳೆ ಹೊರಗಡೆಯಿಂದ ಆಟವಾಡುತ್ತಿದ್ದ ಹುಸೈನ್ ಓಡಿ ಕೊಂಡುಬಂದಾಗ ಆಕಸ್ಮಿಕವಾಗಿ ಕಾಲು ಜಾರಿ ಮುಟ್ಟು ಕತ್ತಿಯ ಮೇಲೆ ಬಿದ್ದಿದ್ದಾನೆ.ಗಂಭೀರ ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಸಹ ಬಾಲಕ ಉಳಿಯಲಿಲ್ಲ. ವಿದ್ಯಾನಗರ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *