
ಈಗಿನ ಜನರಲ್ಲಿ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಮನಸ್ಸಾಗಲಿ ಹಾಗೂ ಮಾನವೀಯತೆ (humanity) ಯಾಗಲಿ ಇಲ್ಲ, ಹೀಗಾಗಿ ಮನುಷ್ಯನಲ್ಲಿ ಮಾನವೀಯತೆಯೇ ಮರೆಯಾಗಿದೆ ಎಂದು ಹೇಳುವುದನ್ನು ನೀವು ನೋಡಿರಬಹುದು. ಆದರೆ ಕೆಲವು ವ್ಯಕ್ತಿಗಳು ಮಾಡುವ ಕೆಲಸಗಳು ಹಾಗೂ ಕಷ್ಟಕ್ಕೆ ಮಿಡಿಯುವ ಮನಸ್ಸುಗಳನ್ನು ನೋಡಿದಾಗ ಮಾನವೀಯತೆ ಇನ್ನು ಜೀವಂತವಾಗಿದೆ ಎಂದೆನಿಸುತ್ತದೆ. ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಮೂಕ ಜೀವಿಗಳ ಪ್ರಾಣ ಉಳಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾ (social media) ದಲ್ಲೂ ಕೂಡಾ ಕಾಣ ಸಿಗುತ್ತಿರುತ್ತವೆ. ಇದೀಗ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೆಸರಿನಲ್ಲಿ ಸಿಲುಕಿದ್ದ ಹದ್ದ (egale) ನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆಯೂ ಪೋಲ್ಯಾಂಡ್ (poland) ನಲ್ಲಿ ನಡೆದಿದೆ.





