ಸಕಲೇಶಪುರ: ಹೇಮಾವತಿ ಪ್ರತಿಮೆ ಲೋಕಾರ್ಪಣೆ.

Share with

ಹಾಸನ : ಜಿಲ್ಲೆಯ ಸಕಲೇಶಪುರ ಪಟ್ಟಣದ ಹೇಮಾವತಿ ನದಿ ಸೇತುವೆ ಪಕ್ಕದಲ್ಲಿ ರೋಟರಿ ಸಂಸ್ಥೆಯಿಂದ ನಿರ್ಮಿ ಸಿರುವ ಹೇಮಾವತಿ ಪ್ರತಿಮೆಯನ್ನು ಶಾಸಕ ಸಿಮೆಂಟ್ ಮಂಜುರವರು ಮೇ 12 ರಂದು ಲೋಕಾ ರ್ಪಣೆ ಮಾಡಿದರು.

”ಹೇಮಾವತಿ ಹಾಗೂ ಉಪ ನದಿಗಳು ನಮ್ಮ ತಾಲೂಕಿನ ಪಶ್ಚಿಮ ಘಟ್ಟದಲ್ಲಿ ಹರಿದು ಗೊರೂರು ಅಣೆಕಟ್ಟೆ ಹಾಗೂ ಎತ್ತಿನಹೊಳೆ ತಿರುವು ಯೋಜನೆ ಮೂಲಕ ಬಯಲು ಸೀಮೆಯ ಜನರ ಬಾಯಾರಿಕೆ ನೀಗಿಸುತ್ತಿದೆ. ಆದರೆ ನೀರು ಕೊಡುತ್ತಿರುವ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರಕಾರಗಳು ಯಾವುದೇ ರೀತಿಯ ವಿಶೇಷ ಪ್ಯಾಕೇಜ್ ಇದುವರೆಗೂ ನೀಡಿಲ್ಲ”

”ಹೇಮಾವತಿ ಜೀವನದಿಯ ಪ್ರತಿ ರೂಪವಾಗಿ ಇಂತಹ ಪ್ರತಿಮೆ ಸಕಲೇಶಪುರಕ್ಕೆ ಅಗತ್ಯ ಇತ್ತು. ಆ ಕೆಲಸ ರೋಟರಿ ಸಂಸ್ಥೆಯವರಿಂದ ಆಗಿರುವುದು ನಿಜಕ್ಕೂ ಶ್ಲಾಘನೀಯ”  ಎಂದು ಮಾಜಿ ಸಚಿವ ಹೆಚ್ ಕೆ ಕುಮಾರಸ್ವಾಮಿ ಹೇಳಿದರು.

ರೋಟರಿ ಸಂಸ್ಥೆ ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್ ಕುಮಾರ್ ಮಾತನಾಡಿ …ರೋಟರಿ ಸಂಸ್ಥೆಯು ಹೇಮಾವತಿ ಪ್ರತಿಮೆ ನಿರ್ಮಿಸಿ ಪುರಸಭೆಗೆ ಹಸ್ತಾಂತರಿಸಿದೆ. ಪುರಸಭೆ ಆಡಳಿತದ ಜತೆಗೆ ಪಟ್ಟಣದ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಪ್ರತಿಮೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ :
ಜಿ.ಪಂ. ಮಾಜಿ ಸದಸ್ಯರಾದ ಚಂಚಲ ಕುಮಾರಸ್ವಾಮಿ, ಕೆ.ಎಸ್.ಕುಮಾರಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷರಾದ ಎಸ್.ಡಿ.ಆದರ್ಶ, ಕಾಡಪ್ಪ, ಕೌಸಲ್ಯ ಲಕ್ಷ್ಮಣಗೌಡ, ಮಾಜಿ ಉಪಾಧ್ಯಕ್ಷ ಮುಖೇಶ್‌ ಶೆಟ್ಟಿ ರೋಟರಿ ಸಂಸ್ಥೆ ಅಧ್ಯಕ್ಷ ಎ.ಡಿ.ವೀರೇಂದ್ರ, ಕಾರ್ಯದರ್ಶಿ ರವಿರಾಜ್ ಪಿ.ಶೆಟ್ಟಿ ಜಾನೇಕೆರೆ ಆರ್. ಪರಮೇಶ್, ಕರವೇ ಅಧ್ಯಕ್ಷ ರಮೇಶ್ ಪೂಜಾರಿ, ಪುರಸಭೆ ಸದಸ್ಯರು, ರೋಟರಿ ಸಂಸ್ಥೆಯ ಸದಸ್ಯರು , ಸ್ಥಳೀಯರು ಹಾಜರಿದ್ದರು.


Share with

Leave a Reply

Your email address will not be published. Required fields are marked *