
ಸಕಲೇಶಪುರ : ತಾಲೂಕಿನ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕನ ನೂತನ ಕಂಪ್ಯೂಟರ್ ಶಾಖೆಯನ್ನು ಅಧ್ಯಕ್ಷರಾದ ವೈ ಪಿ ರಾಜೇಗೌಡ, ಉಪಾಧ್ಯಕ್ಷರಾದ ವಳಲಹಳ್ಳಿ ವೀರೇಶ್, ಗ್ಯಾರೆಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷರು, ಹಾಗೂ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ಉದ್ಘಾಟಿಸಿ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕನ ಅಧ್ಯಕ್ಷರಾದ ವೈ ಪಿ ರಾಜೇಗೌಡ ಮಾತನಾಡಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲೆಂದು ಬ್ಯಾಂಕ್ ನಲ್ಲಿಯೆ ಪಹಣೆ, e-ಸ್ಟಾಂಪ್, ಅನ್ ಲೈನ್ ಆರ್ಜಿ, ಸೇರಿದಂತೆ ವಿವಿದ ಸೌಲಭ್ಯಗಳು ಬ್ಯಾಂಕನಲ್ಲಿ ದೊರೆಯಲಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು ಎಂದರು.
ಉಪಾಧ್ಯಕ್ಷರಾದ ವಳಲಹಳ್ಳಿ ವೀರೇಶ್ ಮಾತನಾಡಿ ನಮ್ಮ ಬ್ಯಾಂಕನಲ್ಲಿ ಅನ್ ಲೈನ್ ಸೇವೆ ದೊರಕುವುದರಿಂದ ರೈತರಿಗೆ ಅನುಕೂಲವಾಗಲಿದ್ದು ಇದರ ಸದುಪಯೋಗ ರೈತರು ಪಡೆದುಕೊಳ್ಳಬಹುದು, ಹಾಗೂ ರೈತರ ಅನುಕೂಲಕ್ಕಾಗಿ, ಮತ್ತು ಬ್ಯಾಂಕ್ ಅಭಿವೃದ್ದಿಗಾಗಿ ಸಂಬದ ಪಟ್ಟ ಸಚಿವರ ಹತ್ತಿರ ಚರ್ಚಿಸಿ ಹೆಚ್ಚಿನ ಅನುದಾನ ತರುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ನಿರ್ದೇಶಕರಾದ ಹೆಚ್ ಹೆಚ್ ಉದಯ್,ವಿಜಯ ಕುಮಾರ್, ವೆದುನಂದನ್ ಶೆಟ್ಟಿ, ನಾಗರಾಜ್, ಹಿತೈಷಿ, ಬ್ಯಾಂಕ್ ವ್ಯವಸ್ಥಾಪಕರಾದ ಮಂಜುಳ, ಸಿಬಂದಿ ವರ್ಗ ಸೇರಿದಂತೆ ಇತರೆ ಸದಸ್ಯರು ಹಾಜರಿದ್ದರು.





