
ಸಕಲೇಶಪುರ : ಬಿರಡಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ದಿನಾಂಕ:21.5.2025 ನಡೆದ ಉಪ ಚುನಾವಣೆಯಲ್ಲಿ ಹೆಚ್. ಸಿ. ಶ್ರುತಿ ಸುಧೀಶ್ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರಾದ ಎಚ್.ಕೆ ಕುಮಾರಸ್ವಾಮಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂಚಲಕುಮಾರಸ್ವಾಮಿ, ಪಂಚಾಯತಿ ಅಧ್ಯಕ್ಷರಾದ ಎಸ್.ಡಿ ಸತೀಶ್,ಸದಸ್ಯರಾದ,ಮದುಮಣಿ,ಶಾರದ,ಎನ್.ಈ.ದೇವರಾಜ್ ,ಸೋಮಶೇಖರ್,ಲಕ್ಷ್ಮಿ,ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್,ಧರ್ಮರಾಜ್ ಶೆಟ್ಟಿ, ಕೆ ಡಿ ಕುಮಾರ್ ,ಮದನ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರಾದ ಕೆ.ಸುಧೀಶ್, ಜೈ ರಾಜು, ಸುರೇಶ ಆಳ್ವ ಮುಂತಾದವರು ಭಾಗವಹಿಸಿ ಶುಭ ಹಾರೈಸಿದರು.
ಚುನಾವಣಾ ಪ್ರಕ್ರಿಯೆಯನ್ನು ತಾಲೂಕು ದಂಡಾಧಿಕಾರಿಗಳು ನಡೆಸಿಕೊಟ್ಟರು ಪಿ.ಡಿ.ಒ.ಗಿರೀಶ್ ಕುಮಾರ್ ಹಾಜರಿದ್ದರು.





