ಸಕಲೇಶಪುರ ವಿಧಾನಸಭಾ ಕ್ಷೇತ್ರದ ‘ಸಮಗ್ರ ಅಭಿವೃದ್ಧಿಗೆ’ ಶಕ್ತಿ ನೀಡುವ ನಿಟ್ಟಿನಲ್ಲಿ ಅನುದಾನ ಒದಗಿಸಲಾಗುವುದು – ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್

Share with

ಆಲೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ಜನ್ಮದಿನಕ್ಕೆ ಶುಭಾಶಯ ಕೋರಲು ವಿಧಾನಸೌಧದ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿರುವುದಾಗಿ ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರದ  ಸಮಗ್ರ ಅಭಿವೃದ್ಧಿಗೆ ಶಕ್ತಿ ನೀಡುವ ನಿಟ್ಟಿನಲ್ಲಿ ಅನುದಾನ ನೀಡುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿರುವುದಾಗಿ ಸಕಲೇಶಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುರಳಿ ಮೋಹನ್ ತಿಳಿಸಿದರು.

ಸಕಲೇಶಪುರ ವಿಧಾನಸಭಾ ಕ್ಷೇತ್ರದ ಎತ್ತಿನಹೊಳೆ ಯೋಜನೆಯಿಂದ ಅತಿ ಅವಶ್ಯಕವಾಗಿ ತುರ್ತಾಗಿ ಆಗಬೇಕಾಗಿರುವ ಹಲವಾರು ಕಾಮಗಾರಿಗಳ ಪಟ್ಟಿಯನ್ನು ಈ ಹಿಂದೆ ನೀಡಲಾಗಿತ್ತು. ಆ ಮನವಿಗೆ ಉಪ ಮುಖ್ಯಮಂತ್ರಿ ರವರು ಹಾಗೂ ಎತ್ತಿನಹೊಳೆ ಯೋಜನಾಧಿಕಾರಿಗಳು ಸ್ಪಂದಿಸಿ, ಅನುಮೋದನೆಯನ್ನು ನೀಡಿ ಮನವಿ ಮಾಡಿರುವ ಕಾಮಗಾರಿಗಳಿಗೆ ಅನುದಾನವನ್ನುಕೂಡ ಬಿಡುಗಡೆ ಮಾಡಿರುತ್ತಾರೆ.

ಈ ನಿಟ್ಟಿನಲ್ಲಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದು, ಕ್ಷೇತ್ರದ ವಿವಿಧ ಗ್ರಾಮಗಳಿಗೆ ಅವಶ್ಯ ಇರುವ ಹಾಗೂ ಎತ್ತಿನಹೊಳೆ ಯೋಜನೆಯಿಂದ ಅತಿ ಅವಶ್ಯಕವಿರುವ ರಸ್ತೆ ನಿರ್ಮಾಣ, ತಡೆಗೋಡೆಗಳು ಮತ್ತು ಕ್ಷೇತ್ರದ ಸಕಲೇಶಪುರ ಆಲೂರು ಕಟ್ಟಾಯದಲ್ಲಿನ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದು ಇದಕ್ಕೆ ಉಪ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುವ ನಿಟ್ಟಿನಲ್ಲಿ ಅನುದಾನವನ್ನು ಕೊಡುವುದಾಗಿ ತಿಳಿಸಿ ಭರವಸೆಯನ್ನ ನೀಡಿದ್ದು, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಆಲೂರು ಕಟ್ಟಾಯ ಸಕಲೇಶಪುರದ ಎಲ್ಲಾ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು


Share with

Tags:

Leave a Reply

Your email address will not be published. Required fields are marked *