
ಆಲೂರು: ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶ ರಕ್ಷಣೆಗಾಗಿ ನಾಗರಿಕರು ಎಂಬ ದ್ವೇಯದೊಂದಿಗೆ ಶಾಸಕ ಸಿಮೆಂಟ್ ಮಂಜು ಹಾಗೂ ಮಠಾಧೀಶ್ವರರ ನೇತೃತ್ವದಲ್ಲಿ ಕೆ. ಇ.ಬಿ ಸರ್ಕಲ್ ನಿಂದ ವೀರಶೈವ ಕಲ್ಯಾಣ ಮಂಟಪದವರೆಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒಂದು ಕಿಲೋಮೀಟರ್ ಉದ್ದದ ತಿರಂಗ ಬಾವುಟವನ್ನು ಮಾಜಿ ಸೈನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು ಮಠಾಧೀಶರು,ಬಾವುಟವನ್ನು ಹಿಡಿದು ಮೆರವಣಿಗೆ ನಡೆಸಿದರು.
ಯಾತ್ರೆಯನ್ನು ಉದ್ದೇಶಿಸಿ ಶಾಸಕ ಸಿಮೆಂಟ್ ಮಂಜು ಮಾತನಾಡಿ ಭಾರತವು ಸನಾತನ ಹಿಂದೂ ರಾಷ್ಟ್ರವಾಗಿದ್ದು 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿದ್ದು ಭಾರತವು ಇದುವರೆಗೂ ಯಾವ ದೇಶದ ಮೇಲು ದಂಡೆತ್ತಿ ಯುದ್ಧಕ್ಕೆ ಹೋದ ಉದಾಹರಣೆಗಳಿಲ್ಲ ಆದರೆ ಶತ್ರು ರಾಷ್ಟ್ರ ಪಾಕಿಸ್ತಾನ ಇಂದು ನಮ್ಮ ಭಾರತೀಯ ಮಹಿಳೆಯರ ಸಿಂಧೂರವನ್ನು ಅಳಿಸಲು ಬಂದರೆ ಬಿಡುವುದಿಲ್ಲ ಎಂಬ ಪ್ರತ್ಯುತ್ತರವನ್ನು ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ನಮ್ಮ ದೇಶದ ಹೆಮ್ಮೆಯ ಸೈನಿಕರು ಅಪರೇಷನ್ ಸಿಂಧೂರದ ಮೂಲಕ ತಕ್ಕ ಉತ್ತರವನ್ನು ಕೊಟ್ಟು ನಮ್ಮರಾಷ್ಟ್ರ ಎಂಬುದನ್ನು ನಿರೂಪಿಸಿದೆ ಎಂದರು.
ನಂತರ ಕಾರ್ಜುವಳ್ಳಿ ಸ್ವಾಮೀಜಿ ಮಾತನಾಡಿ ಅಮೆರಿಕದಷ್ಟೇ ಭಾರತ ದೇಶವು ಇಂದು ಒಂದು ಸದೃಢ ರಾಷ್ಟವಾಗಿದ್ದು ಯುದ್ಧಕ್ಕೆ ಬೇಕಾದ ಎಲ್ಲಾ ರೀತಿಯ ತಾಂತ್ರಿಕ ತಂತ್ರಜ್ಞಾನವನ್ನು ಹೊಂದಿದೆ ಭಾರತದ ರಕ್ಷಣೆಗಾಗಿ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸೈನಿಕ ತಯಾರಾಗಬೇಕು ದೇಶ ಗಟ್ಟಿ ಇರಬೇಕಾದರೆ ದೇಶದ ಗಡಿ ಗಟ್ಟಿ ಇರಬೇಕು ಗಡಿ ಗಟ್ಟಿ ಇದ್ದರೆ ನಮ್ಮ ದೇಶದ ಹೆಮ್ಮೆಯ ಸೈನಿಕರು ಗಟ್ಟಿ ಇರಬೇಕಾದರೆ ನಾವೆಲ್ಲರೂ ಭಗವಂತನನ್ನು ಪೂಜಿಸುತ್ತೇವೆ ಆದರೆ ಇಂದು ದೇಶವನ್ನು ಕಾಯುವ ನಮ್ಮ ಸೈನಿಕರಿಗೆ ನೈತಿಕ ಹಾಗೂ ಭೌತಿಕ ಶಕ್ತಿಯನ್ನು ಕೊಡುವಂತೆ ಮೂಲಕ ಸಂಕಲ್ಪ ಮಾಡಬೇಕಾಗಿದೆ ಎಂದರು.
ಮೆರವಣಿಗೆಯಲ್ಲಿ ಭಾರತದ ಸೈನಿಕರಿಗೆ ಜೈಕಾರ ಹಾಕುವ ಮೂಲಕ ಸುಮಾರು ಒಂದು ಕಿಲೋಮೀಟರ್ ಉದ್ದದ ತಿರಂಗ ಬಾವುಟವನ್ನು ಸೈನಿಕರು,ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಜನಪ್ರತಿನಿಧಿಗಳು, ಹಾಗೂ ಸಾರ್ವಜನಿಕ ಬಂಧುಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಪರೇಷನ್ ಸಿಂಧೂರ ತಿರಂಗ ಯಾತ್ರೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷೆ ಉಮಾ ರವಿ ಪ್ರಕಾಶ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್. ಹಿರಿಯ ಮುಖಂಡರುಗಳಾದ ಧರ್ಮ. ಅಜಿತ್ ಚಿಕ್ಕಣಗಾಲು. ರಮೇಶ್. ಕಣಗಾಲ್ ಲೋಕೇಶ್. ಭರಣ್. ರುದ್ರೇಶ್. ಹನುಮಂತೇಗೌಡ. ಜೆಸಿಬಿ ರವಿ. ವೆಂಕಟೇಶ್. ದಡದಲ್ಲಿ ನವೀನ್. ಮಾವನೂರ್ ಮೋಹನ್. ಕಟ್ಟೆಗದ್ದೆ ನಾಗರಾಜ್.ಲೋಹಿತ್. ಮುಂತಾದವರು ಹಾಜರಿದ್ದರು.





