ಸಕಲೇಶಪುರದಲ್ಲಿ ಗೋಡೆ ಕುಸಿತ ಗಾಯಳುಗಳ ಅರೋಗ್ಯ ವಿಚಾರಿಸಿದ ಶಾಸಕರು

Share with

ಸಕಲೇಶಪುರ:  ಭಾರಿ ಮಳೆಯಿಂದಾಗಿ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ಗೋಡೆ ಕುಸಿದು ನಾಲ್ವರಿಗೆ ಗಾಯವಾದ ಹಿನ್ನೆಲೆ ಶಾಸಕ ಸಿಮೆಂಟ್ ಮಂಜು ಅವರು ಕ್ರಾಫರ್ಡ್ ಆಸ್ಪತ್ರೆಯಲ್ಲಿ  ಅವರ ಆರೋಗ್ಯ ವಿಚಾರಿಸಿದರು.

ಸಕಲೇಶಪುರ ತಾಲ್ಲೂಕಿನ ಪಟ್ಟಣದ ಹೊಸ  ಬಸ್   ನಿಲ್ದಾಣದ ಪಕ್ಕದ ಕ್ಯಾಂಟೀನ್  ತೀವ್ರ  ಮಳೆ ಸುರಿಯುತ್ತಿರುವ ಪರಿಣಾಮ ಗೋಡೆ ಕುಸಿದು 4 ಜನ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ನಗರದ ಕ್ರಾಫರ್ಡ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ವೈದ್ಯರಿಂದ ಮಾಹಿತಿ ಪಡೆದು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಹಾಸನ ಜಿಲ್ಲಾಸ್ಪತ್ರೆಗೆ ವರ್ಗಾಯಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಗೋಡೆ ಕುಸಿದ ಕ್ಯಾಂಟೀನ್‌ಗೂ ಭೇಟಿ ನೀಡಿದರು

ನಂತರ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಅನಾಹುತ ಸಂಭವಿಸಿದೆ. ಮಳೆಗಾಲ ಸರಿಯಾದ ರೀತಿಯಲ್ಲಿ ಆರಂಭವಾಗುವ ಮೊದಲೆ ಈ ರೀತಿಯಾದರೆ ಇನ್ನು ಮುಂದಿನ ದಿನಗಳನ್ನು ಎದುರಿಸುವುದು ಕಷ್ಟಕರ  ಎಲ್ಲರೂ ಜಾಗೃತರಾಗಿರಬೇಕು ಎಂದರು.


Share with

Tags:

Leave a Reply

Your email address will not be published. Required fields are marked *