ಉಡುಪಿ: ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಅಂಗನವಾಡಿಗಳಿಗೆ ಗುರುವಾರ (ಮೇ.29) ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.


ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಗುರುವಾರವೂ ಮುಂದುವರಿದಿದ್ದು, ಬೆಳಗ್ಗಿನಿಂದ ಜಿಲ್ಲಾದ್ಯಂತ ನಿರಂತರ ಗಾಳಿಮಳೆ ಸುರಿದಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮೇ 30ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯ ವಿವಿಧೆಡೆ ಉತ್ತಮ ಗಾಳಿ-ಮಳೆಯಾಗಿದ್ದು, ಮೆಸ್ಕಾಂನ 50 ತಂತಿ ಕಂಬಗಳು ನೆಲಕ್ಕೆ ಉರುಳಿವೆ. 2 ಟ್ರಾನ್ಸ್‌ಫಾರ್ಮರ್ಗಳು ಕೆಟ್ಟು ಹೋಗಿದ್ದು, ನಷ್ಟದ ವಿವರ ಇನ್ನಷ್ಟೇ ತಿಳಿದುಬರಬೇಕಿದೆ. ಕುಂದಾಪುರ ತಾಲೂಕಿನ 7 ಮನೆ, ಕಾರ್ಕಳ, ಕಾಪು ಹಾಗೂ ಬ್ರಹ್ಮಾವರ ತಾಲೂಕಿನ ತಲಾ 1 ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.




