ಕಾಮಗಾರಿ ಮಂಜೂರಾತಿಗಾಗಿ ಸಚಿವರಿಗೆ ಮನವಿ ಮಾಡಿದ ಮುರಳಿ ಮೋಹನ್.

Share with

ಸಕಲೇಶಪುರ: ಕರ್ನಾಟಕ ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವರಾದಂತಹ  ಸತೀಶ್ ಜಾರಕಿಹೊಳಿಯವರು ಸಕಲೇಶಪುರಕ್ಕೆ ಭೇಟಿ ನೀಡಿದಾಗ  ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ  ಮುರಳಿ ಮೋಹನ್ ರವರು ಕಾಮಗಾರಿಗಾಗಿ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.

ಹಾನುಬಾಳು ಹೋಬಳಿ ಕೋಗಾರ್ ಕ್ರಾಸ್ ರಸ್ತೆ (ಎನ್.ಹೆಚ್ 252) ಕಿಮೀ 4.50ರಲ್ಲಿ ಬೆಡಗಿಹಳ್ಳಿ ಹಳ್ಳಕ್ಕೆ ಸೇತುವೆ ಪುನರ್ ನಿರ್ಮಾಣ ಕಾಮಗಾರಿ ಮತ್ತು ಜಪೋವತಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿಯ ತುರ್ತಾಗಿ ಅತಿ ಅವಶ್ಯಕವಾಗಿದ್ದು ಸೇತುವೆ ಸಂಪೂರ್ಣ ಶಿಥಲಗೊಂಡಿದ್ದು ಸಂಚಾರಕ್ಕೆ ಯೋಗ್ಯ ವಿಲ್ಲದ ಕಾರಣ ಅವುಗಳನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಮಾಡಬೇಕೆಂದು ಸಂಸದರು ಸಚಿವರಲ್ಲಿ ಮನವಿ ಮಾಡಲಾಯಿತು.

ಸಚಿವರು ಇದಕ್ಕೆ ಒಪ್ಪಿಗೆ ಸೂಚಿಸಿ ತುರ್ತಾಗಿ ಕಾಮಗಾರಿಯನ್ನು ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು ಮತ್ತು ಅನುದಾನವನ್ನು ಬಿಡುಗಡೆ ಮಾಡಿಕೊಡುವುದಾಗಿ ಕೂಡ ಸಚಿವರು ತಿಳಿಸಿದರು ಎಂದು ಕಾಂಗ್ರೇಸ್ ತಿಳಿಸಿದೆ.


Share with

Tags:

Leave a Reply

Your email address will not be published. Required fields are marked *