
ಆಲೂರು. ತಾಲೂಕಿನ ಪಟ್ಟಣ ಪಂಚಾಯಿತಿಯ ಮುಂಭಾಗದಲ್ಲಿ ಪೌರಕಾರ್ಮಿಕರು ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದು ಇದುರೆಗೂ ಸರಕಾರ ಯವುದೇ ಕ್ರಮವಹಿಸಿಲ್ಲ ಹಾಗಾಗಿ ರಾಜ್ಯದೆಲ್ಲೆಡೆ ಪೌರಕಾರ್ಮಿಕರು ಮುಷ್ಕರ ಆರಂಬಿಸಿದ್ದು ನಮ್ಮ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಸರಕಾರ ತ್ವರಿತವಾಗಿ ಈಡೇಸಬೇಕು ಎಂದು ಆಲೂರು ತಾಲೂಕು ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಗಣೇಶ್ ಸರಕಾರವನ್ನು ಒತ್ತಾಯಿಸಿ ಪ್ರತಿಭಟನೆ ಮಾಡಿದರು.
ಆಲೂರು ತಾಲೂಕಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರಕಾರ್ಮಿಕರು ಕೆಲ ಕಾಲ ಪ್ರತಿಭಟನೆ ನಡೆಸಿ , ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು. ಪೌರಕಾರ್ಮಿಕರ ಆನೇಕ ವರ್ಷಗಳ ಬೇಡಿಕೆ ಸರಕಾರ ತ್ವರಿತವಾಗಿ ಈಡೇರಿಸಬೇಕು ಎಂದು ಕಳೆದ ನಾಲ್ಕು ದಿನಗಳಿಂದ ಮುಷ್ಕರ ಮಾಡುತ್ತಾ ಬಂದಿರುತ್ತೇವೆ ಎಂದು ಮಾತನಾಡಿದಲ್ಲದೆ ನಮ್ಮ ಪ್ರಮುಖ ಬೇಡಿಕೆಗಳು
ಹೊರಗುತ್ತಿಗೆ ಆಧಾರದ ಮೇಲೆ ನೀರು ಸರಬರಾಜು ಸಹಾಯಕರು/ವಾಹನ ಚಾಲಕರು / ಬೀದಿ ದೀಪ ಸಹಾಯಕರು ಲೋಡರ್ಸ್, ಪಾರ್ಕ, ಗಾರ್ಡನರ್, ಕಾವಲುಗಾರ ಸ್ಯಾನಿಟರಿ ಸೂವರ್ ವೈಸರ್ ಸೇರಿದಂತೆ ವಿವಿಧ ವೃಂದಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ನೇರಪಾವತಿಗೆ ನೇಮಕ ಮಾಡಿ,
ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ 2020-24ನೇ ಸಾಲಿನಲ್ಲಿ ನೇಮಕಾತಿಗೊಂಡ ಪೌರಕಾರ್ಮಿಕರು, ಲೋಡರ್ ಸ್ವೀಪರ್ಸ್ ವೇತನವನ್ನು ಎಸ್.ಎಫ್.ಸಿ ವೇತನಾನುಧನದಡಿಯಲ್ಲಿ ವೇತನ ನೀಡುವುದು, ವಾಹನ ಚಾಲಕರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ವಸ್ತು ನಿರ್ವಹನೆಗೆ ಮತ್ತು ಮಾಲಿನ್ಯ ನೀರು ನಿರ್ವಹಣೆಗೆ ಅಗತ್ಯವಾದ ವಾಹನಗಳನ್ನು ಖರೀದಿಸುತ್ತಿದ್ದು, ಈ ವಾಹನಕ್ಕೆ ಪೂರಕವಾಗಿ ವೃಂದ ಮತ್ತು ನೇಮಕಾತಿಯಲ್ಲಿ ವಾಹನ ಚಾಲಕ ಹುದ್ದೆಗಳನ್ನು ಮಂಜೂರು ಮಾಡದೇ ಇರುವುದರಿಂದ ಶಾಶ್ವತ ವಾಹನಚಾಲಕರನ್ನು ನೇಮಕ ಮಾಡಿಕೊಳ್ಳಲು ತೊಡಕಾಗಿದ್ದು. ಈ ಅಂಶವನ್ನು ಸಮಗ್ರವಾಗಿ ಪರಿಶೀಲಿಸಿ ಮಂಜೂರಾತಿ ಹುದ್ದೆಗಳನ್ನು ವಿಲೀನಾತಿ/ಸಕ್ರಮಗೊಳಿಸುವುದು.
ಹಾಲಿ ಕೆಲಸ ನಿರ್ವಹಿಸುತ್ತಿರುವಂತಹ ನೇರಪಾವತಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ನೌಕರರನ್ನು ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿರುವ ನಗರಸಭೆಗೆ ಶೇ50%ರಷ್ಟು ನೇರ ನೇಮಕಾತಿ ಇರುವುದನ್ನು ತಿದ್ದುಪಡಿ ಮಾಡಿ ಶೇ.100 ರಷ್ಟು ನೇಮಕಾತಿ ಮಾಡುವುದು,
ನೀರು ಸರಬರಾಜು ಸಹಾಯಕರನ್ನು ಖಾಯಂ ಮಾಡುವುದು, ಆಕೌಂಟೆಂಟ್ ಜೂನಿಯರ್ ಸೀನಿಯರ್ ಪ್ರೋಗ್ರಾಮರ್,
ಸಂಘಟನಾಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಮೆಕಾನಿಕಲ್ ಇಂಜಿನಿಯರ್ ಹುದ್ದೆಯನ್ನು ಸೃಷ್ಟಿಸುವುದು, ಒಳಚರಂಡಿ ವ್ಯವಸ್ತೆಗೆ ಸಿಬ್ಬಂದಿ ನೇಮಕ ಮಾಡುವುದು, ಕಂಪ್ಯೂಟರ್ ಆಪರೇಟರ್, ಪೌರಕಾರ್ಮಿಕರು, ಸಹಾಯಕ ನೀರು ಸರಬರಾಜು ಸಹಾಯಕರು, ಸ್ಥಳಿಯ ಸಂಸ್ಥೆಗಳ ವಿವಿಧ ವೃಂಧದ ಹುದ್ದೆಗಳು ನೇಮಕ ಮಾಡಿಕೊಳ್ಳುವುದು, ನೇರ ಪಾವತಿಯಲ್ಲಿರುವ ಪೌರಕಾರ್ಮಿಕರು ಲೋಡರ್, ಕ್ಲೀನರ್, ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕೆ 10 ಲಕ್ಷ ಪರಿಹಾರ ಧನ ನೀಡುವುದು ಅವಲಂಬಿತ ಕುಟುಂಬಕ್ಕೆ ಹುದ್ದೆ ನೀಡುವುದು ಖಾಯಂ ಪೌರಕಾರ್ಮಿಕರಿಗೆ ನೀಡಿರುವ ಗೃಹ ಭಾಗ್ಯ ನೀಡಬೇಕೆಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷರಾದ ಗಣೇಶ್. ಮಂಜುನಾಥ್. ಪುರುಷೋತ್ತಮ್ ಬಸವರಾಜು. ಪೌರಕಾರ್ಮಿಕರ ಸಿಬ್ಬಂದಿಗಳು. ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





