
ಅಯೋಧ್ಯೆಯ ರಾಮಮಂದಿರ ಮತ್ತೊಂದು ಕ್ಷಣಕ್ಕೆ ಸಜ್ಜಾಗಿದೆ. 2ನೇ ಬಾರಿ ಪ್ರಾಣ ಪ್ರತಿಷ್ಠೆಗೆ ಮುನ್ನ ಬಂಗಾರದ ಗುಮ್ಮಟ ಉದ್ಘಾಟನೆ ಆಗಲಿದೆ.

ಇಂದಿನಿಂದ 3 ದಿನ 2ನೇ ಬಾರಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಜೊತೆಗೆ ಮೊದಲ ಮಹಡಿಯಲ್ಲಿ ಇತರೆ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದೆ.
ಈಗಾಗಲೇ ಸಾವಿರಾರು ಭಕ್ತರು ಅಯೋಧ್ಯೆಯತ್ತ ಮುಖಮಾಡಿದ್ದಾರೆ. ಈ ಮಧ್ಯೆ, ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ತಂದೆ ಎರಾಲ್ ಮಸ್ಕ್ ಭಾರತಕ್ಕೆ ಬಂದಿದ್ದು, ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ.




