ಭಾರತದ ವಿರುದ್ಧ ಮಾತನಾಡಿದ ಭುಟ್ಟೋಗೆ ಚಳಿಬಿಡಿಸಿದ ಪತ್ರಕರ್ತ!

Share with

ನ್ಯೂಯಾರ್ಕ್‌: ಪಹಲ್ಲಾಮ್ ದಾಳಿ ಬಳಿಕ ಭಾರತವು ಮುಸ್ಲಿಮರನ್ನು ರಾಕ್ಷಸರೆಂಬಂತೆ ಬಿಂಬಿಸುತ್ತಿದೆ ಎಂದು ಪಾಕಿಸ್ಥಾನದ ಮಾಜಿ ಸಚಿವ, ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ವಿಶ್ವಸಂಸ್ಥೆ ಮಾಧ್ಯಮ ಸಂವಾದದಲ್ಲಿ ಆರೋಪಿಸಿದ್ದಾರೆ.

ಆದರೆ, ಇದಕ್ಕೆ ಸ್ಥಳದಲ್ಲೇ ಅಲ್ಲಿನ ಪತ್ರಕರ್ತರೊಬ್ಬರು ಸರಿ-ಯಾಗೇ ತಿರುಗೇಟು ಕೊಟ್ಟಿದ್ದು, ಸೇನೆಯ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಅಧಿಕಾರಿಗಳೇ ಭಾಗಿಯಾ-ಗಿದ್ದರಲ್ಲವೇ ಎಂಬುದಾಗಿ ಪ್ರಶ್ನಿಸಿದ್ದು, ಭುಟ್ಟೋ ಇರುಸು ಮುರುಸಿಗೊಳಗಾದ ಪ್ರಸಂಗ ನಡೆದಿದೆ.

ಪ್ರಸ್ತುತ ಬಿಲಾವಲ್ ಭುಟ್ಟೋ ನೇತೃತ್ವದ ಪಾಕ್ ನಿಯೋಗವು ಅಮೆರಿಕ ಪ್ರವಾಸದಲ್ಲಿದೆ. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ಭಾರತದಲ್ಲಿರುವ ಮುಸ್ಲಿಮರನ್ನು ಕೆಟ್ಟವರೆಂದು ಬಿಂಬಿಸಲು ಪಹಲ್ಲಾಮ್ ದಾಳಿಯನ್ನು ಭಾರತ ಸರಕಾರ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದರು. ಕೂಡಲೇ ಮಧ್ಯ ಪ್ರವೇಶ ಮಾಡಿದ ಪತ್ರಕರ್ತ ಅಹ್ಮದ್ ಫಾತಿ, “ಆಪರೇಷನ್ ಸಿಂದೂರ ಬಳಿಕ ಭಾರತದ ವಾಯುಪಡೆಯ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದವರಲ್ಲಿ ಒಬ್ಬರು ಮುಸ್ಲಿಂ ಮಹಿಳಾ ಸೇನಾಧಿಕಾರಿಯೂ ಇದ್ದರಲ್ಲವೇ’ ಎಂದು ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಲ್ಲೇಖೀಸಿ ಹೇಳಿದರು. ಇದರಿಂದ ಭುಟ್ಟೋ ವಿಚಲಿತರಾಗಿ, ನಿರುತ್ತರರಾದರು.


Share with

Leave a Reply

Your email address will not be published. Required fields are marked *