ಕಾಸರಗೋಡು: ಇಲ್ಲಿನ ಮುಳ್ಳೇರಿಯಾ ಸಮೀಪದ ಕಾರ್ಲೆಯಲ್ಲಿ ಮಗುಚಿಬಿದ್ದ ಕಾರಿನಡಿಗೆ ಸಿಲುಕಿ 2 ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಹರಿ-ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ (2 ವ) ಮೃತಪಟ್ಟ ಮಗು. ಜೂನ್.5ರಂದು ಸಂಜೆ 6 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ.

ಹರಿ ಎಂಬುವರು ತನ್ನ ಮಡದಿ ಹಾಗೂ ಮಕ್ಕಳ ಜೊತೆ ಪೇಟೆಗೆ ಹೋಗಿ ಮಾರ್ಲಿ ಮನೆಗೆ ತಲುಪಿಸಿ, ಬಳಿಕ ಹಾರಿ ಕಾರಿನಲ್ಲಿ ಪೇಟೆಯತ್ತ ಹೋಗುತ್ತಿದ್ದ ವೇಳೆ ಎಂನೆಯ ಸಮೀಪದಲ್ಲಿ ಕಾರು ನಿಂತು ಹೋಯಿತು. ಮಣ್ಣಿನ ಏರು ರತೆಯಾಗಿದ್ದರಿಂದ ಕರು ಮುಂದೆ ಚಲಿಸದೆ ಚಕ್ರ ಮಣ್ಣಿನಲ್ಲಿ ಸಿಲುಕಿಕೊಂಡಿತ್ತು. ಇದನ್ನು ಕಂಡ ಪತಿ ಹಾಗೂ ಮಕ್ಕಳ ಎಂನೆಯಿಂದ ಕಾರಿನತ್ತ ಬಂದಿದ್ದಾರೆ. ಈ ಮಧ್ಯೆ ಕಾರು ಹಿಂದಕ್ಕೆ ಚಲಿಸಿದಾಗ ಹಿಂಬದಿ ಯಲ್ಲಿದ್ದ ಹಿರಿಯ ಪುತ್ರಿಗೆ ಗಾಯ ಉಂಟಾಗಿದೆ. ಬಳಿಕ ಕಾರು ಮಗುಚಿದ್ದು, ಕಿರಿಯ ಪುತ್ರಿ ಹೃದ್ಯಾನಂದ ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದ್ದಳು. ಕೂಡಲೇ ಮಗುವನ್ನು ಆಸ್ಪತ್ರೆಗೆ ತಲಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಪರಿಸರದಲ್ಲಿ ಶೋಕ ಸೃಷ್ಟಿಸಿದೆ.




