ತನ್ನ ಉದುರಿದ ಕೂದಲನ್ನು ಸಂಗ್ರಹಿಸಿ ಹಣ ಸಂಪಾದಿಸುತ್ತಿರುವ ಯುವತಿ! ಕೋಟ್ಯಾಧಿಪತಿಯಾಗಹು ದು ಎಂದ್ರು ನೆಟ್ಟಿಗರು

Share with

ನವದೆಹಲಿ: ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮಹಿಳೆಯರು ಕೂದಲಿನ ಕುರಿತಾಗಿ ಹೆಚ್ಚಿನ ಕಾಳಜಿ ಹೊಂದಿರುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಉದುರುತ್ತಿರುವ ತನ್ನ ಕೂದಲನ್ನೇ ಬಳಸಿಕೊಂದು ಹಣ ಸಂಪಾದನೆ ಮಾಡುತ್ತಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಉದುರಿದ ಕೂದಲಿಗೆ ಭಾರಿ ಬೇಡಿಕೆ ಇದೆ. ಈ ಕುರಿತಾಗಿ ತಿಳಿದುಕೊಂಡ ಯುವತಿ 2 ವರ್ಷಗಳಿಂದ ಉದುರಿ ಹೋಗಿದ್ದ ತನ್ನ ಕೂದಲನ್ನು ಸಂಗ್ರಹಿಸಿ ಕೊನೆಗೆ ಅದನ್ನು ಮಾರಾಟ ಮಾಡುವ ಮೂಲಕ ಸಾಕಷ್ಟು ಹಣವನ್ನು ಗಳಿಸಿದ್ದಾಳೆ.

ಈ ವಿಡಿಯೋದಲ್ಲಿ ಏನಿದೆ?:

ಒಬ್ಬ ಹುಡುಗಿ ಕಳೆದ ಎರಡು ವರ್ಷಗಳಿಂದ ಉದುರುತ್ತಿದ್ದ ತನ್ನ ಕೂದಲನ್ನು ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಸಂಗ್ರಹಿಸುತ್ತಾಳೆ. ಕೂದಲು ತುಂಬಿದ ನಂತರ, ಹುಡುಗಿ ಅದನ್ನು ತೂಕ ಮಾಡಿ ಮಾರುತ್ತಾಳೆ. ಪ್ರತಿಯಾಗಿ, ಅವಳಿಗೆ 190 ರೂ. ಸಿಗುತ್ತದೆ. ಅವಳು ಇಡೀ ಘಟನೆಯ ವೀಡಿಯೊ ಮಾಡಿದ್ದಾಳೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗಿದೆ.

ಈ ವೀಡಿಯೊವನ್ನು being_earthfriendly ಎಂಬ ಖಾತೆಯಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಸಾವಿರಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ. ಈ ವೀಡಿಯೊವನ್ನು ನೋಡಿದ ನಂತರ, ಜನರು ನಾವು ಹೀಗೆ ನನ್ನ ಕೂದಲನ್ನು ಸಂಗ್ರಹಿಸಿ ಮಾರಾಟ ಮಾಡಿದ್ದರೆ ಕೋಟ್ಯಾಧಿಪತಿ ಆಗುತ್ತಿದ್ದೇನು ಎಂದು ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


Share with

Leave a Reply

Your email address will not be published. Required fields are marked *