ನವದೆಹಲಿ: PPF, ಸುಕನ್ಯಾ ಸಮೃದ್ಧಿ ಯೋಜನೆ (SSY), ಕಿಸಾನ್ ವಿಕಾಸ್ ಪತ್ರ (KVP) ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ 2026ರ ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದ ಬಡ್ಡಿದರಗಳನ್ನು ಸೆ.30ರಂದು ಸರ್ಕಾರ ನಿರ್ಧರಿಸಲಿದೆ.
ಜೂನ್ ಅಂತ್ಯದಿಂದ 10 ವರ್ಷದ ಸರ್ಕಾರಿ ಬಾಂಡ್‌ಗಳ ಇಳುವರಿ ಸುಮಾರು 31 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯಾಗಿರುವುದರಿಂದ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಅಲ್ಪ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಈ ಯೋಜನೆಗಳ ಕೊನೆಯ ಪರಿಶೀಲನೆ ಜೂ.30, 2026ರಂದು ನಡೆದಿತ್ತು. ಸದ್ಯ PPFಗೆ 7.1%, ಸುಕನ್ಯಾ ಸಮೃದ್ಧಿಗೆ 8.2% ಮತ್ತು KVPಗೆ 7.5% ಬಡ್ಡಿದರ ಇದೆ.




